ದೊಡ್ಡಬಳ್ಳಾಪುರ: ತಾಲೂಕಿನ ಅರಳುಮಲ್ಲಿಗೆ, ದರ್ಗಾಜೋಗಿಹಳ್ಳಿ, ತಿಪ್ಪೂರು ಗ್ರಾಮ ಪಂಚಾಯಿತಿಯ 43 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ವಶಪಡಿಸಿಕೊಂಡಿರುವ ಕಾಂಗ್ರೆಸ್ ಭಾರಿ ಅಂತರದ ಗೆಲುವು ದಾಖಲಿಸಿದೆ.
13 ಸ್ಥಾನಗಳನ್ನು ಗಳಿಸಿದ ಬಿಜೆಪಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, 3 ಸ್ಥಾನಗಳಲ್ಲಿ ಗೆದ್ದ ಜೆಡಿಎಸ್ ಮುಖಭಂಗಕ್ಕೆ ಒಳಗಾಗಿದೆ.
ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅರುಳುಮಲ್ಲಿಗೆ, ದರ್ಗಾಜೋಗಿಹಳ್ಳಿ ಗ್ರಾಪಂಗಳು ಮತ್ತು ಸದಸ್ಯರೊಬ್ಬರ ಅಕಾಲಿಕ ಮರಣದಿಂದ ತೆರವಾಗಿದ್ದ ತಿಪ್ಪೂರು ಗ್ರಾಪಂ ಒಂದು ಸ್ಥಾನಕ್ಕೆ ಚುನಾವಣೆ ನಡೆದಿತ್ತು. ನಗರದ ಜೂನಿಯರ್ ಕಾಲೇಜಿನಲ್ಲಿ ಗುರುವಾರ ಮತಎಣಿಕೆ ನಡೆಯಿತು.
ಅರಳುಮಲ್ಲಿಗೆ ಗ್ರಾಪಂನ 18 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 14 ಸ್ಥಾನಗಳಲ್ಲಿ ಜಯಶಾಲಿಗಳಾದರೆ, ಬಿಜೆಪಿ ಬೆಂಬಲಿತರು 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರು. ಇಲ್ಲಿ ಜೆಡಿಎಸ್ ಒಂದೇ ಒಂದು ಸ್ಥಾನ ಗೆಲ್ಲಲು ವಿಲವಾಯಿತು.
ದರ್ಗಾಜೋಗಿಹಳ್ಳಿ ಗ್ರಾಪಂನ 24 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 13 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿದಿರು. ಬಿಜೆಪಿಗೆ 9 ಸ್ಥಾನಗಳು ಲಭ್ಯವಾದವು. ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿ ಬೆಂಬಲಿತನಾಗಿದ್ದ ಬಂಡಾಯ ಅಭ್ಯರ್ಥಿ ಒಂದು ಸ್ಥಾನದಲ್ಲಿ ಗೆದ್ದಿದ್ದಾರೆ. ತಿಪ್ಪೂರು ಗ್ರಾಪಂ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವಿನ ನಗೆಬೀರಿದೆ.
ಡ್ರಾ ತಂದ ಅದೃಷ್ಟ: ಅರುಳುಮಲ್ಲಿಗೆ ಗ್ರಾಪಂ ವ್ಯಾಪ್ತಿಯ ಆಲಹಳ್ಳಿ ಬೂತ್‌ನಲ್ಲಿ ಕೃಷ್ಣಮೂರ್ತಿ ಮತ್ತು ಗೋಪಾಲಕೃಷ್ಣ ತಲಾ 393 ಮತಗಳನ್ನು ಪಡೆದುಕೊಂಡಿದ್ದರು. ಲಿತಾಂಶ ಟೈ ಆದ ಹಿನ್ನೆಲೆಯಲ್ಲಿ ಲಾಟರಿ ಎತ್ತುವ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು. ಡ್ರಾ ದಲ್ಲಿ ಕೃಷ್ಣಮೂರ್ತಿ ಗೆಲುವು ಸಾಧಿಸಿದರು.
ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ: ವಾರ್ಡ್-1, ಗೌರಮ್ಮ(216), ವಿ. ಜನಾರ್ದನ್(236), ಶೋಭಾಬಾಯಿ ಪ್ರಕಾಶ್‌ರಾವ್(299). ವಾರ್ಡ್2- ಕೆ.ವೈ. ಮಮತಾ ಆಟೋಮಾರುತಿ (336), ನಾಗೇಶ್ ಕೆ ಗೌಡ (450). ವಾರ್ಡ್3- ಎನ್. ಸುರೇಶ್‌ಕುಮಾರ್ (345), ಬಿ.ಎಲ್. ರಾಮಪ್ರಸಾದ್ (250), ಶಶಿಕಲಾ ನಾಗರಾಜು (305). ವಾರ್ಡ್4- ಯಾಸ್ಮಿನ್ (453), ಜೆ.ಎಸ್. ನಾಗಭೂಷಣ್ (666). ವಾರ್ಡ್5- ಆಂಜಿನಪ್ಪ (122), ಜೆ.ವೈ. ಮಲ್ಲಪ್ಪ (231), ರೇಣುಕಾ ಚಂದ್ರಶೇಖರ್ (223). ವಾರ್ಡ್6- ಎನ್.ಆನಂದಮ್ಮ (146), ಮಂಜುನಾಥ್ (222). ವಾರ್ಡ್7-ಟಿ. ಪ್ರೇಮಾ ಜಿ. ರಂಗಸ್ವಾಮಿ (266), ದೊಡ್ಡನಂಜುಂಡಪ್ಪ (421), ವಾರ್ಡ್8- ರಜಿಯಾ (258), ಎನ್. ಗಿರೀಶ್ (436). ವಾರ್ಡ್9-ಮೆಹಬೂಬ್‌ಖಾನ್ (538), ಭಾಗ್ಯ.ಎನ್.ಎಂ ವೆಂಕಟೇಶ್ (597), ಮುಜಾಹಿದ್‌ಖಾನ್ (457). ವಾರ್ಡ್10 ನಾಗಸಂದ್ರ- ಎಸ್. ಜಯಶ್ರೀ (339), ಎ. ಪ್ರಕಾಶ್.ಎ (352).
ಅರಳುಮಲ್ಲಿಗೆ ಗ್ರಾಪಂ: 6 ಕರೇನಹಳ್ಳಿ- ಅ್ರೆೆಜ್ (576), ನಿರ್ಮಲಾ (650), ನವೀನ್‌ಕುಮಾರ್ (630). ಅರಳುಮಲ್ಲಿಗೆ1- ಮಂಗಳಗೌರಮ್ಮ (169), ಎನ್. ಸಿಂಧೂ (380), ಎ.ಎಸ್. ಸುಬ್ರಮಣಿ (450). ಅರಳುಮಲ್ಲಿಗೆ2-ಎಂ. ಭಾಗ್ಯಮ್ಮ (252), ಸೌಭಾಗ್ಯಾ (459), ವೆಂಕಟೇಶ್ (582). ಏಕಾಶಿಪುರ- ಮಂಜುಳಾ (396), ವೈ.ಕೆ. ವೆಂಕಟೇಶ್ ಬಾಬು (434). ಆಲಹಳ್ಳಿ-ಎ. ಕೃಷ್ಣಮೂರ್ತಿ (393), ಎನ್. ಜಮುನಾ (186), ಆರ್. ಪುಷ್ಪಲತಾ (320). ಎಸ್.ಎಂ. ಗೊಲ್ಲಹಳ್ಳಿ-ಶಿವಕುಮಾರ್ (230), ಎನ್. ಲೋಕೇಶ್ (288). ಕರೇನಹಳ್ಳಿ2- ಡಿ.ಆರ್. ದ್ರುವಕುಮಾರ್ (261), ಸೀನಪ್ಪ (250).
ತಿಪ್ಪೂರು ಗ್ರಾಮ ಪಂಚಾಯಿತಿ- ಚನ್ನರಾಮಯ್ಯ (399)