ಹಾಸನ: ನೂತನ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರನ್ನು ಭಾರತ ಸೇವಾದಳ ಹಾಸನ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಗೌರವ ಸಮರ್ಪಣೆಯೊಂದಿಗೆ ಅಭಿನಂದಿಸಲಾಯಿತು. ಇದೇ ವೇಳೆ ಕೆಲ ಬೇಡಿಕೆಗಳ ಮನವಿ ಪತ್ರವನ್ನು ಕೂಡ ನೀಡಲಾಯಿತು.
ಈ ವರ್ಷದ ಕಾರ್ಯ ಚಟುವಟಿಕೆಗಳನ್ನು ತಿಳಿಸಿಕೊಡುವುದರೊಂದಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಮಾಹಿತಿಯ ಕಾರ್ಯಗಾರವನ್ನು ನಡೆಸಲು ಹಾಗೂ ವಿದ್ಯಾರ್ಥಿ ನಾಯಕತ್ವ ಶಿಬಿರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲು ಮನವಿ ಮಾಡಲಾಯಿತು. ಮತ್ತು ಸ್ವಾತಂತ್ರೃ ದಿನಾಚರಣೆ ಸಂದರ್ಭದಲ್ಲಿ ಜಿಲ್ಲಾಡಳಿತ ವತಿಯಿಂದ ಸಾಧಕರಿಗೆ ನೀಡುವ ಸನ್ಮಾನವನ್ನು ಭಾರತ ಸೇವಾದಳದ ವತಿಯಿಂದ ಒಬ್ಬರು ಸ್ವಯಂಸೇವಕರನ್ನು ಗುರುತಿಸಿ ಸನ್ಮಾನಿಸಲು ಕೋರಲಾಯಿತು. ಭಾರತ ಸೇವಾದಳದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಎಂ.ಕೆ. ಕಮಲ್ ಕುಮಾರ್ ಅವರು ಸೇವಾದಳ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರಣೆಯನ್ನು ಜಿಲ್ಲಾಧಿಕಾರಿಗೆ ನೀಡಿದರು.
ಈ ವೇಳೆ ಸೇವಾದಳದ ಜಿಲ್ಲಾಕೋಶಾಧ್ಯಕ್ಷರಾದ ಜಿ. ಆರ್.ಶ್ರೀನಿವಾಸ್, ಜಿಲ್ಲಾ ಸಮಿತಿ ಸದಸ್ಯರಾದ ಹರೀಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡರು, ತಾಲೂಕು ಸಮಿತಿಯ ಅಧ್ಯಕ್ಷರಾದ ಜಿ. ಕುಮಾರ್, ತಾಲೂಕು ಸಮಿತಿಯ ಸದಸ್ಯರುಗಳಾದ ಸಿ.ಆರ್. ಅಮರೇಂದ್ರ, ವರದರಾಜು, ವಲಯ ಸಂಘಟಕರಾದ ವಿ.ಎಸ್. ರಾಣಿ ಇತರರು ಉಪಸ್ಥಿತರಿದ್ದರು.