ಜಿಲ್ಲೆ

ಭಾರತ್ ತೋಡೊ ಅಭಿಯಾನ ಆಗದಿರಲಿ

ಹುಬ್ಬಳ್ಳಿ: ಭಾರತ್ ಜೋಡೋ ಅಭಿಯಾನ ಕರ್ನಾಟಕಕ್ಕೆ ಆಗಮಿಸಿರುವುದು ಸಂತಸ. ಆದರೆ, ಭಾರತ್ ತೋಡೊ ಅಭಿಯಾನ ಆಗಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಕಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತ ಮತ್ತು ಭಾರತ ಮಾತೆಯನ್ನು ಗೌರವಿಸುವ ಜನರನ್ನು ರಾಹುಲ್ ಗಾಂಧಿ ಭೇಟಿ ಮಾಡಬೇಕು. ಅದು ಬಿಟ್ಟು ಭಾರತ ಇಬ್ಭಾಗ ಮಾಡುವವರನ್ನು ಅಲ್ಲ ಎಂದು ಮಾರ್ವಿುಕವಾಗಿ ಹೇಳಿದರು.

ದೆಹಲಿಗೆ ಮಾತ್ರ ಸೀಮಿತವಾಗಿದ್ದ ಕಾಂಗ್ರೆಸ್ ಚಟುವಟಿಕೆಗಳು ಪ್ರಥಮ ಬಾರಿಗೆ ದೇಶಾದ್ಯಂತ ನಡೆಯುತ್ತಿದೆ. ಕಾಂಗ್ರೆಸ್​ನವರು ಭಾರತ ಇಬ್ಭಾಗ ಮಾಡುವುದನ್ನು ಹೃದಯದಿಂದ ಬಂದ್ ಮಾಡಲಿ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ನಾಯಕರು. ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್, ಗಾಂಧಿ ಕುಟುಂಬದ ಪಕ್ಷ ಆಗಿರುವುದರಿಂದ ವಿಚಾರ ಮಾಡಬೇಕು. ಪ್ರಧಾನಿ ಆಗಿದ್ದಾಗ ಮನಮೋಹನ ಸಿಂಗ್ ಅವರು ಆ ಕುಟುಂಬದ ಕೈಗೊಂಬೆ ಆಗಿದ್ದರು. ಇವರು ಕೂಡ ಹಾಗೆ ಆಗಬಾರದು. ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಅಧ್ಯಕ್ಷರಾಗಬಾರದು ಎಂದು ಕಿವಿ ಮಾತು ಹೇಳಿದರು.

ಆರ್​ಎಸ್​ಎಸ್ ಅನ್ನು ಮೊದಲಿನಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ. ದೇಶದ ಹಿತ ಕಾಯುವ ಉದ್ದೇಶಕ್ಕಾಗಿ ಜನಿಸಿರುವ ಸಾಂಸ್ಕೃತಿಕ ಸಂಘಟನೆ ಅದು ಎಂದರು.