ಅರಸೀಕೆರೆ: ಭಾರತೀಯ ಹಿಂದು ಸನಾತನ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ ಎಂದು ಕೆ.ಬಿದರೆ ದೊಡ್ಡಮಠದ ಶ್ರೀಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕಲ್ಲುಸಾದರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಕರಿಯಮ್ಮದೇವಿಯವರ ನೂತನ ದೇವಾಲಯ ಪ್ರವೇಶ, ವಿಮಾನ ಗೋಪುರ ಕಳಸ ಪ್ರತಿಷ್ಟಾಪನೆ ಮಹೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಸಾನಿದ್ಯವಹಿಸಿ ಆಇರ್ವಚನ ನೀಡಿದರು.ಹಿಂದು ಎನ್ನುವುದು ಕೇವಲ ಧರ್ಮವಲ್ಲ.ಬದಲಾಗಿ ಅದೊಂದು ಭವ್ಯ ಸಂಸ್ಕೃತಿ ಎನ್ನುವ ಭಾವನೆ ಜನರಲ್ಲಿ ಮನೆ ಮಾಡಿದೆ. ಇಲ್ಲಿನ ಸಂಪ್ರದಾಯ, ಆಚರಣೆಗಳ ಕಾರಣದಿಂದಾಗಿಯೇ ಪಾಶ್ಚಾತ್ಯರು ಕೂಡ ನಮ್ಮತ್ತ ತಿರುಗಿ ನೋಡವಂತಾಗಿದೆ.ದೇವರು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಜಾತಿ ಬೇಧವಿಲ್ಲ ಎನ್ನುವುದನ್ನು ಮಹಾಕವಿ ಹರಿಹರ ಮಾದಾರ ಚನ್ನಯ್ಯ,ಕೋಳೂರು ಕೊಡಗೂಸಿನ ರಗಳೆಯಲ್ಲಿ ಸಾಬೀತಾಗಿದೆ.ಪೂಜೆ, ಪುನಸ್ಕಾರಗಳ ಜತೆಗೆ ಪಂಚಭೂತಗಳಲ್ಲಿ ದೈವೀ ಸಾಕ್ಷಾತ್ಕಾರ ಕಂಡುಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯವೆಂದರೆ ತಪ್ಪಾಗಲಾರದು.ಪಾಲಕರು ಹಾಗೂ ಗುರು,ಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಮೂಲಕ ಭವಿಷ್ಯ ರೂಪಿಸುವ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ದುಷ್ಟರ ದಮನಕ್ಕೆ ದೇವರು ಅವತರಿಸಿ ಬರುತ್ತಾರೆ ಎನ್ನುವ ನಂಬಿಕೆ ಭಾರತೀಯರಲ್ಲಿದೆ.ಅದಕ್ಕೆ ಪೂರಕ ಎನ್ನುವಂತೆ ಗ್ರಾಮೀಣ ಭಾಗದಲ್ಲಿ ದೇಗುಲಗಳ ನಿರ್ಮಾಣ, ಜೀರ್ಣೋದ್ಧಾರ ಸೇರಿ ಹಲವು ಕೆಲಸ ಕಾರ್ಯಗಳು ನಿರಂತರವಾಗಿ ಸಾಗುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರ ವಚನ ಸಂದೇಶಗಳು ಬದುಕಿಗೆ ಸ್ಪೂರ್ತಿಯ ಸೆಲೆಯಾಗಬೇಕು. ಇನ್ನೊಂದು ದಶಕದಲ್ಲಿ ತಾಲೂಕಿನಿಂದ ಅತಿಹೆಚ್ಚು ಸರ್ಕಾರಿ ನೌಕರರು ಆಯ್ಕೆಯಾಗಬೇಕು ಎನ್ನುವ ಆಶಯ ನಮ್ಮದಾಗಿದೆ.ದೇವರು, ಧರ್ಮಾಚರಣೆ ಮೂಲಕ ಮಕ್ಕಳನ್ನು ಸರಿದಾರಿಯಲ್ಲಿ ಕೊಂಡೊಯ್ಯುವತ್ತ ಎಲ್ಲರೂ ಗಮನಹರಿಸಬೇಕು. ದೇಗುಲದ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ರೂ.ನಗದು ನೀಡುವ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿದ್ದು ಇನ್ನುಳಿದ ಕೆಲಸ ಕಾರ್ಯಗಳಿಗೆ ಹತ್ತು ಲಕ್ಷ ರೂ.ಅನುದಾನ ಕೊಡಿಸುವ ಭರವಸೆ ನೀಡಿದರು.
ಲೇಖಕ ರೋಹಿತ್ ಚಕ್ರತೀರ್ಥ ಹಿಂದು ಧರ್ಮ ಮತ್ತು ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದರು.ಶ್ರೀಶಿವಪ್ರಕಾಶ ಶಿವಚಾರ್ಯ ಸ್ವಾಮೀಜಿ,ಶ್ರೀ ಮೀರಭದ್ರ ಸ್ವಾಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಪಿ ರುದ್ರಮುನಿ ಸ್ವಾಮಿ, ಗುಡಿ ಗೌಡರಾದ ಚಂದ್ರಪ್ಪ ,ಜಿ.ಪಂ ಮಾಜಿ ಸದಸ್ಯರಾದ ಕೆ.ಪಿ ಶಿವಮೂರ್ತಿ ಪಾರ್ವತಮ್ಮ ಶಿವಮೂರ್ತಿ,ಗ್ರಾ.ಪಂ ಅಧ್ಯಕ್ಷ ಕೆ.ಜಿ ಮಲ್ಲಿಕಾರ್ಜುನ್, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ಖಜಾಂಚಿ ನಂದೀಶ್, ಗಂಗಧರಾಚಾರ್,ಗ್ರಾಪಂ ಸದಸ್ಯ ಉಮೇಶ್ ಸೇರಿ ಹಲವರ್ವುೇದಿಕೆಯಲ್ಲಿದ್ದರು.