ಬಸವಕಲ್ಯಾಣ: ಭಾರತೀಯ ಇಂಜಿನಿಯರ್‌ಗಳಿಗೆ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಬಹಳಷ್ಟು ಬೇಡಿಕೆ ಇದೆ ಎಂದು ಶಾಸಕ ಶರಣು ಸಲಗರ ಹೇಳಿದರು.
ಬಸವಕಲ್ಯಾಣ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ರ‍್ಸ್ (ಬಿಎಸಿಇ) ನಗರದಲ್ಲಿ ಸೋಮವಾರ ಆಯೋಜಿಸಿದ್ದ ೫೮ನೇ ಇಂಜಿನಿಯರ‍್ಸ್ ದಿನಾಚರಣೆ ಉದ್ಘಾಟಿಸಿದ ಅವರು, ವಿಶ್ವ ಕಂಡ ಶ್ರೇಷ್ಠ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ. ನಾಡು ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿಎಸಿಇ ಅಧ್ಯಕ್ಷ ಬಸವರಾಜ ಮುಸ್ತಾಪುರೆ ಮಾತನಾಡಿ, ಕನ್ನಡ ನಾಡು ಮತ್ತು ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ್ದ ಶ್ರೇಷ್ಠ ಇಂಜಿನಿಯರ್ ವಿಶ್ವೇಶ್ವರಯ್ಯ ವಿಶ್ವರತ್ನರಾಗಿದ್ದಾರೆ. ಅಸಾಧ್ಯವಾದುದ್ದನ್ನು ಸಾಧ್ಯವಾಗಿಸಿದ ಅವರ ಸಾಧನೆ, ವ್ಯಕ್ತಿತ್ವ ಪ್ರೇರಣಾದಾಯಿ ಆಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ರಾಜೇಶ್ವರ ಶಿವಾಚಾರ್ಯ, ಸಹಾಯಕ ಆಯುಕ್ತ ಮುಕುಲ್ ಜೈನ್, ತಹಸೀಲ್ದಾರ್ ದತ್ತಾತ್ರೇಯ ಗಾದಾ, ಸಿಪಿಐ ಅಲಿಸಾಬ್, ಬಿಜೆಪಿ ನಗರ ಘಟಕ ಅಧ್ಯಕ್ಷ ಸಿದ್ದು ಬಿರಾದಾರ್ ಮಾತನಾಡಿದರು.
ಉಪಾಧ್ಯಕ್ಷ ರಾಮಕಾಂತ ದುಬೆ, ಕಾರ್ಯದರ್ಶಿ ಮಹಾಂತೇಶ ಉಳ್ಳೆ, ಸುಧಾಕರ ಬಿರಾದಾರ್, ಶ್ರೀಶೈಲ ವಾತಡೆ, ಧೋಂಡಿರಾವ ಕುಲಕರ್ಣಿ, ಪುರುಷೋತ್ತಮ ಜಾಧವ್, ಸಚಿನ್ ಶಾಶೆಟ್ಟೆ, ವಿನೋದ ಪರ್ಮಾ, ಧನಂಜಯ ಕಾಡಾದಿ, ಬಸವರಾಜ ಗುಂಗೆ, ಕಿರಣ ಹಡಸೂರೆ ಇತರರಿದ್ದರು. ನವಲಿಂಗ ಪಾಟೀಲ್ ಸ್ವಾಗತಿಸಿ ನಿರೂಪಣೆ ಮಾಡಿದರು.
ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇಂಜಿನಿಯರ್ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ವಿಶ್ವೇಶ್ವರಯ್ಯನವರಿಗೆ ಸಲ್ಲಿಸುವ ಗೌರವ. ಪ್ರತಿಯೊಬ್ಬ ಅಭಿಯಂತರ ಸರ್‌ಎಂವಿ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
| ಶ್ರೀ ರಾಜೇಶ್ವರ ಶಿವಾಚಾರ್ಯ
ತಡೋಳಾ-ಮೇಹಕರ್ ಮಠ