ಜಿಲ್ಲೆ

ಭಾರತೀನಗರ ಗ್ರಾಪಂಗೆ ಕೌಶಲ್ಯಾ ಅಧ್ಯಕ್ಷೆ

ಕೆ.ಎಂ.ದೊಡ್ಡಿ: ಇಲ್ಲಿನ ಭಾರತೀನಗರ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಕೌಶಲ್ಯಾ ಅರ್ಕೇಶ್ ಹಾಗೂ ಉಪಾಧ್ಯಕ್ಷರಾಗಿ ಸುವರ್ಣ ರೇವಣ್ಣ ಅವಿರೋಧವಾಗಿ ಅಯ್ಕೆಯಾದರು.


ಶನಿವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೌಶಲ್ಯಾಅರ್ಕೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುವರ್ಣ ರೇವಣ್ಣ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಹಾಗೂ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಶಾಂತ್ ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ಘೋಷಿಸಿದರು.


ಆಯ್ಕೆಯಾದ ಅಧ್ಯಕ್ಷೆ ಕೌಶಲ್ಯಾ ಅರ್ಕೇಶ್ ಹಾಗೂ ಉಪಾಧ್ಯಕ್ಷೆ ಸುವರ್ಣ ರೇವಣ್ಣ ಅವರನ್ನು ವಿಧಾನಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ ಅಭಿನಂದಿಸಿದರು. ಗ್ರಾ.ಪಂ ಮಾಜಿ ಅಧ್ಯಕ್ಷರಾದ ಎಂ.ಪಿ.ರವಿಚಂದ್ರ, ವಕ್ರತುಂಡ ವೆಂಕಟೇಶ್, ಸೌಮ್ಯಾ ಪುಟ್ಟಸ್ವಾಮಿ, ಮಾಜಿ ಉಪಾಧ್ಯಕ್ಷರಾದ ಮಹದೇವಮ್ಮ, ಸೌಭಾಗ್ಯಮ್ಮ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ. ಶ್ರೀನಿವಾಸ್, ಪುಟ್ಟರಾಮು, ಕೆ.ವಿ. ಶ್ರೀನಿವಾಸ್, ವಿನಯ್ ಹೊನ್ನೇಗೌಡ, ಗುಡಿಗೆರೆ ಮಿಥುನ್, ಮಣಿಗೆರೆ ರಾಮಚಂದ್ರೇಗೌಡ, ಭಾರತೀ ಇತರರಿದ್ದರು.