ಕೆ.ಎಂ.ದೊಡ್ಡಿ: ಮಂಡ್ಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಹೆಚ್ಚು ಬಹುಮಾನ ಪಡೆದಿದೆ.
ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ 8ನೇ ತರಗತಿಯಿಂದ ಆರ್.ಧನ್ಯತಾ, 200 ಮೀ. ಮತ್ತು 50 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಪ್ರಥಮ ಸ್ಥಾನ, 50 ಮೀ. ಫ್ರೀಸ್ಟೈಲ್ ದ್ವಿತೀಯ ಸ್ಥಾನ, ಕೆ.ಎಸ್.ಹನ್ಸಿಕಾ - ಫ್ರೀಸ್ಟೈಲ್ 100 ಮೀ.ನಲ್ಲಿ ಪ್ರಥಮ ಹಾಗೂ 50 ಮೀ.ನಲ್ಲಿ ದ್ವಿತೀಯ ಸ್ಥಾನ, ಎಚ್.ವಂಶಿಕಾ 100 ಮೀ. ಫ್ರೀಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ, ಐ.ಪ್ರಥಮ್ ಬ್ಯಾಕ್ ಸ್ಟ್ರೋಕ್ 50ಮೀ. ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸ್ಕೇಟಿಂಗ್ ಸ್ಪರ್ಧೆಯಲ್ಲಿ 8ನೇ ತರಗತಿಯ ವಾಸುದೇವ್ ಹಾಗೂ ಕಿಶೋರ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟದ ಬಾಸ್ಕೆಟ್‌ಬಾಲ್ ಕ್ರೀಡಾಕೂಟದಲ್ಲಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳಾದ ಯದುನಂದನ್, ಸಾತ್ವಿಕ್, ದ್ರುಪದ್, ಗಗನ್ ದೀಪ್, ಕೆ.ಎಂ.ಪ್ರೀತಂ ವಿದ್ಯಾರ್ಥಿಗಳ ತಂಡ ಬಾಸ್ಕೆಟ್‌ಬಾಲ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಂಎಲ್‌ಸಿ ಮಧು ಜಿ.ಮಾದೇಗೌಡ, ಕಾರ್ಯದಶೀ ಬಿ.ಎಂ.ನಂಜೇಗೌಡ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಶಯ್‌ಮಧು, ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ, ಮುಖ್ಯಶಿಕ್ಷಕಿ ಪ್ರತಿಮಾ ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ