ಜಗನ್‌ಪಾಲ್, ಅಧ್ಯಕ್ಷ 
ಜಿಲ್ಲೆ

ಭಾರತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಗೆ ಆಯ್ಕೆ

ಶನಿವಾರಸಂತೆ: ಭಾರತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೆ.ಎಂ.ಜಗನ್‌ಪಾಲ್, ಗೌರವ ಕಾರ್ಯದರ್ಶಿಯಾಗಿ ಎನ್.ಕೆ.ಅಪ್ಪಸ್ವಾಮಿ ಆಯ್ಕೆಯಾದರು.

ವಿದ್ಯಾಸಂಸ್ಥೆಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಮತ್ತು ಗೌರವ ಕಾರ್ಯದರ್ಶಿ ಸ್ಥಾನಕ್ಕಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇಬ್ಬರನ್ನೂ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಅಧ್ಯಕ್ಷ ಜಗನ್‌ಪಾಲ್ ಮಾತನಾಡಿ, ಹಲವಾರು ದಶಕಗಳ ಹಿಂದೆ ಹಿರಿಯರು ಹುಟ್ಟು ಹಾಕಿದ ಶಿಕ್ಷಣ ಸಂಸ್ಥೆ ಪ್ರಸ್ತುತ ದೊಡ್ಡ ವಿದ್ಯಾಸಂಸ್ಥೆಯಾಗಿ ಅಭಿವೃದ್ಧಿ ಹೊಂದಿದೆ. ವಿದ್ಯಾಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ ಬಿಎ, ಬಿಕಾಂ ವಿಭಾಗಳಿದ್ದು, ಇದರೊಂದಿಗೆ ಮತ್ತೊಂದು ಕೋರ್ಸ್ ತೆರೆಯಲು ಯೋಜನೆ ನಡೆಸಲಾಗಿದೆ ಎಂದರು.
ಮಹಾಸಭೆಯಲ್ಲಿ ಉಪಾಧ್ಯಕ್ಷ ಮಹಮ್ಮದ್‌ಪಾಷ, ನಿರ್ದೇಶಕರಾದ ಎಂ.ಎಂ.ಆನಂದ್, ಬಿ.ಕೆ.ಚಿಣ್ಣಪ್ಪ, ಎನ್.ಬಿ.ನಾಗಪ್ಪ, ಕೆ.ಸಿ.ಉತ್ತಪ್ಪ, ಎನ್.ಬಿ.ಅನಿಲ್, ಪುಷ್ಪಾ ಪೊನ್ನಪ್ಪ, ಗಾಯತ್ರಿ ತಮ್ಮಯ್ಯ ಮುಂತಾದವರು ಹಾಜರಿದ್ದರು.