ಚಿಕ್ಕಮಗಳೂರು: ಭಾರತಾಂಬೆಯ ಮೊದಲ ಮಗಳು ಕರುನಾಡÀ ಭುವನೇಶ್ವರಿ. ಆ ತಾಯಿಯ ಮಡಿಲಿನಲ್ಲಿ ಅಕ್ಕರೆಯಿಂದ ಸೇವೆ ಸಲ್ಲಿಸುತ್ತಿರುವ ಸಾಹಿತ್ಯ ಪರಿಷತ್ತಿನಲ್ಲಿ ಪ್ರತಿ ಹೆಣ್ಣಿಗೂ ಜಯವಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ತಿಳಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಹಿಳಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡದ ಹಬ್ಬ ಅಥವಾ ಜಾತ್ರೆಗಳಲ್ಲಿ ಪಾಲ್ಗೊಳ್ಳಲು ಯಾವುದೇ ಆಹ್ವಾನದ ಅವಶ್ಯಕತೆಯಿಲ್ಲ. ಮುಕ್ತವಾಗಿ ಕನ್ನಡತಿಯರು ಪಾಲ್ಗೊಂಡರೆ ಕಾರ್ಯಕ್ರಮಕ್ಕೆ ಕಳೆಬಂದAತೆ. ತಾವು ಮೂಲತ ಆಂಗ್ಲಭಾಷೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರೂ ಅಪ್ಪಟ ಕನ್ನಡತಿ. ಇದೀಗ ಕಾರ್ಯನಿಮಿತ್ತ ಎಲ್ಲೆ ತೆರಳಿದರೂ ಕನ್ನಡ ಮಗಳೆನ್ನಲು ಬಹಳಷ್ಟು ಆತ್ಮಾಭಿಮಾನವಿದೆ ಎಂದರು.
ಮಹಿಳೆಯ ಸಾಹಿತ್ಯ ಅಥವಾ ಸ್ವಾಭಿಮಾನದ ಹೋರಾಟ ಹಿಂದಿನಿAದಲೂ ಇದೆ. ಗಂಡನ ಆಜ್ಞೆ ಹಾಗೂ ಮಕ್ಕಳ ಪಾಲನೆಯ ಮುಖ್ಯ ಜವಾಬ್ದಾರಿಯೊಂದಿಗೆ ಸಾಹಿತ್ಯ, ಸಂಗೀತ, ದೇಶರಕ್ಷಣೆ ಹಾಗೂ ಸಮಾಜದ ವಿವಿಧ ಸ್ಥರಗಳಲ್ಲಿ ತೊಡಗಿಸಿಕೊಂಡು ಕೌಟುಂಬಿಕ ಚಿಂತನೆಗಳ ನಡುವೆಯೂ ಮುಖ್ಯವಾಹಿನಿಯಲ್ಲಿ ಬೆಳಕು ತೋರುತ್ತಿರುವಳು ಎಂದರು.
ಮನೆಯ ಸಂಭ್ರಮ, ಊರಿನ ಜಾತ್ರೆ, ಪರಿಷತ್ತಿನ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೆಣ್ಣಿದ್ದರೆ ಅದ ಕ್ಕೊಂದು ಕಳೆಯಿದ್ದಂತೆ. ಭವ್ಯವಾಗಿ ಶೃಂಗಾರಗೊAಡು ಇಡೀ ಹಬ್ಬದ ಸಂಭ್ರಮವನ್ನು ಮೆರಗು ತುಂಬುವವ ಳು ಹೆಣ್ಣೆಂದರೆ ತಪ್ಪಾಗಲಾರದು. ಈ ಆಡಂಬರ, ಶೃಂಗಾರ ಹಾಗೂ ನವೀನತೆಯ ಸೌಂದರ್ಯ ಮಹಿಳೆಯ ಹೋಲುತ್ತದೆ ಎಂದರು.
ಸಾಹಿತಿ ದೀಪಾ ಹಿರೇಗುತ್ತಿ ಮಾತನಾಡಿ, ಮಹಿಳೆಯ ಸೌಂದರ್ಯವನ್ನು ನೋಡಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿಲ್ಲ. ಆಳವಾಗಿ ಅಧ್ಯಯನ ನಡೆಸಿ ರಚಿಸಿದ ಪುಸ್ತಕಗಳಿಗೆ ಪ್ರಶಸ್ತಿ ಬಂದಿದೆ. ಆ ಸಾಲಿನಲ್ಲಿ ಬಾನು ಮುಷ್ತಕ್ ಹಾಗೂ ದೀಪಾಬಾಸ್ತಿ ನಿರರ್ಗಳ ಸಾಧನೆಗೆ ಅಂತರಾಷ್ಟಿçÃಯ ಬುಕರ್ ಪಶಸ್ತಿಗಳಿಸಿ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಬದುಕಿನ ಸಂಕಷ್ಟಗಳ ನಡುವೆಯು ಹೆಣ್ಣು ಹೆಣ್ಣೀಗೆ ಸ್ಪಂದಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಮಹಿಳೆ ಸಮಸ್ಯೆಗೆ ಒಳಗಾಗುವುದಿಲ್ಲ. ಆ ನಿಟ್ಟಿನಲ್ಲಿ ಮಹಿಳಾ ಲೋಕ ಹೆಚ್ಚೆಚ್ಚು ಅರಿವು ಮೂಡಿಸಿಕೊ ಳ್ಳುವ ಜೊತೆಗೆ ಪರಸ್ಪರ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಆಧುನಿಕತೆ ಜಗತ್ತಿನಲ್ಲಿ ಕೆಲವರು ಸಂವಿಧಾನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸುವ ಪ್ರವೃತ್ತಿ ಪ್ರಚಲಿತದಲ್ಲಿದೆ. ಆದರೆ ಆ ಸಂವಿಧಾನದಿAದಲೇ ಭಾರತದಲ್ಲಿ ಮಹಿಳೆಯೊಬ್ಬರು ರಾಷ್ಟçಪತಿ ಹುದ್ದೆ ಸೇರಿದ ಂತೆ ಜನಪ್ರತಿನಿಧಿಗಳಾಗಲು ಸಾಧ್ಯವಾಗಿದೆ ಎಂಬ ಅರಿವು ಟೀಕೆ ಮಾಡುವವರಿಗಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಎಚ್. ಕೆ.ವಿಜಯಲಕ್ಷ್ಮೀ, ಪ್ರಪ್ರಥಮ ಮಹಿಳಾ ಸಮ್ಮೇಳನ ಸರ್ವರ ಸಹಕಾರದಿಂದ ಅದ್ಬುತವಾಗಿ ಮೂಡಿಬಂದಿದೆ. ಅಲ್ಲದೇ ಯುವಕವಿಯತ್ರಿಯರು, ಬರಹಗಾರ್ತಿಯರಿಗೆ ಪೂರಕವಾಗಿದ್ದು ಈ ಶೈಕ್ಷಣಿಕ ಸಾಲಿನಲ್ಲಿ ಮನಮು ಟ್ಟುವಂತ ಕಾರ್ಯಕ್ರಮ ನಡೆದಿರುವುದು ಹೆಮ್ಮೆ ತಂದಿದೆ ಎಂದರು.
ಇದೇ ವೇಳೆ ಡಾ. ಮಂಜುಳಾ ಹುಲ್ಲಳ್ಳಿ, ಸತ್ಯವತಿ ಮತ್ತು ಪ್ರತಿಭಾ ನಂದಕುಮಾರ್ ಅವರಿಗೆ ಸಾಹಿತ್ಯಸಿರಿ ಹಾಗೂ ಹನ್ನೆರಡು ಮಂದಿಗೆ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಸ್ವಾಗತ ಸಮಿತಿ ಅಧ್ಯಕ್ಷೆ ರೇಖಾ ಹುಲಿಯ ಪ್ಪಗೌಡ, ಹಿರಿಯ ವೈದ್ಯ ಡಾ. ಜೆ.ಪಿ.ಕೃಷ್ಣೇಗೌಡ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಬಿ.ಪ್ರಕಾಶ್, ಎಸ್‌ಟಿಜೆ ಕಾ ಲೇಜು ಪ್ರಾಚಾರ್ಯೆ ಜೆ.ಕೆ.ಭಾರತಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರೂಪನಾಯ್ಕ್, ಕಸಾಪ ತಾಲೂಕು ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಉಪಸ್ಥಿತರಿದ್ದರು.