ಕಲಬುರಗಿ: ಭಾರತದ ಸಂಸ್ಕೃತಿ, ಪರಂಪರೆ ಉಳಿವಿಗೆ ತಾಯಂದಿರ ತ್ಯಾಗ ಪರಿಶ್ರಮ ಅಪಾರ ಎಂದು ಬಾಳೆಹೊನ್ನೂರು ಜಗದ್ಗುರು ಶ್ರೀ ಡಾ.ವೀರಸೋಮೇಶ್ವರ ಶಿವಾಚಾರ್ಯರು ನುಡಿದರು.
ಚವದಾಪುರಿ ಹಿರೇಮಠದ ಲಿಂ.ಶ್ರೀ ಶಾಂತವೀರ ಶಿವಾಚಾರ್ಯರ ೪೩ನೇ ಪುಣ್ಯಸ್ಮರಣೋತ್ಸವ, ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿವಶಕ್ತಿ ಸಂಗಮ, ೧೧ ಸಾವಿರ ಮುತ್ತೆÊದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿ, ಭಾರತದ ಶ್ರೇಷ್ಠ ಪರಂಪರೆ, ಆಚಾರ ವಿಚಾರ, ಉಡುಗೆ ತೊಡುಗೆ ಮಕ್ಕಳಿಗೆ ತಿಳಿಸುವ ಕಾರ್ಯ ತಾಯಂದಿರು ಮಾಡುತ್ತಿದ್ದಾರೆ ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೆರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಮಾತನಾಡಿ, ೧೧ ಸಾವಿರ ಮುತ್ತೆÊದೆಯರ ಉಪಸ್ಥಿತಿಯಿಂದ ಶರಣಬಸವೇಶ್ವರ ಸಂಸ್ಥಾನವು ಸ್ವರ್ಗ ಲೋಕವಾಗಿದೆ. ವಿಶ್ವ ಮುನ್ನಡೆಸಲು ಸ್ತಿçà ಶಕ್ತಿ ಅವಶ್ಯವಾಗಿದೆ. ಶಿವಶಕ್ತಿ ಸಂಗಮದಲ್ಲಿ ಭಾಗಿಯಾದ ಎಲ್ಲ ತಾಯಂದಿರ ಬಾಳು ಬಂಗಾರವಾಗಲಿ ಎಂದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಶ್ರೀ ಶಾಂತವೀರ ಶಿವಾಚಾರ್ಯರು ಲೋಕಾಕಲ್ಯಾಣ ಹಲವು ಕೆಲಸ ಮಾಡಿದ್ದು, ಅವರ ಜೀವನವೇ ನಮಗೆ ದಾರಿದೀಪ. ಕೆಳಗೆ ಬಿದ್ದವರನ್ನು ಮೇಲೆ ಎತ್ತುವ, ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗುವ ಕೆಲಸ ನಾಡಿನ ಮಠಮಾನ್ಯಗಳು ಮಾಡಿವೆ. ಮಾನವ ಜನ್ಮದಿಂದಲೇ ಸಕಲ ಜೀವಗಳ ಕಲ್ಯಾಣವಾಗಲಿದೆ ಎಂದು ಎ¯್ಲÁ ಶ್ರೀಗಳು ಹೇಳುತ್ತಾರೆ. ಅಂತಹದೇ ಕೆಲಸ ಚೌದಾಪುರಿ ಹಿರೇಮಠ ಮಾಡುತ್ತಿದೆ ಎಂದರು.
ಜಿಡಗಾ ಮುಗಳಖೋಡದ ಶ್ರೀ ಡಾ.ಮುರುಘರಾಜೇಂದ್ರ ಮಹಾಶಿವಯೋಗಿಗಳು, ಚವದಾಪೂರಿ ಹಿರೇಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ಶಿವಮೂರ್ತಿ ಶಿವಾಚಾರ್ಯರು ಸ್ವಾಗತಿಸಿದರು. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಅಲ್ಲಮಪ್ರಭು ಪಾಟೀಲï ಮಾತನಾಡಿದರು.
ಶ್ರೀ ಡಾ.ಶರಣಬಸವಪ್ಪ ಅಪ್ಪ, ಶ್ರೀ ಗುರುಪಾದಲಿಂಗ ಶಿವಯೋಗಿಗಳು, ಶ್ರೀನಿವಾಸ ಸರಡಗಿ ಶ್ರೀ, ತೋನಸನಹಳ್ಳಿ, ಹೊನ್ನಕಿರಣಗಿ ಶ್ರೀ, ಚಿಂಚನಸೂರು ಶ್ರೀ, ಜವಳಿ ಶ್ರೀ, ಯಡ್ರಾಮಿ ಶ್ರೀ, ಮಳಖೇಡ ಶ್ರೀ, ಜೇರಟಗಿ ಶ್ರೀಗಳು, ಫಿರೋಜಬಾದ್-ಸಂತೆಕೆಲ್ಲೂರ ಸೇರಿ ವಿವಿಧ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು.
ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಶಾಸಕ ಮಹಾಂತೇಶ ಕೌಜಲಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣು ಮೋದಿ, ಶಿವಶರಣಪ್ಪ ಸಿರಿ, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ನೀಲಕಂಠರಾವ ಮೂಲಗೆ, ಶಿವಕಾಂತ ಮಹಾಜನ್, ಅಪ್ಪು ಕಣಕಿ, ಈರಣ್ಣ ಗುಳೇದ್, ಶರಣಗೌಡ ಪಾಟೀಲ್, ಅರುಣಕುಮಾರ ಪಾಟೀಲ್ ಮೇಳಕುಂದಾ ಇತರರಿದ್ದರು.