ಹೊಳೆನರಸೀಪುರ: ಭಾರತದ ಸಂವಿಧಾನ ಅಪಾಯದಲ್ಲಿದೆ ರಕ್ಷಣೆ ಮಾಡುವ ಕರ್ತವ್ಯ ನಮ್ಮದಾಗಬೇಕು ಎಂದು ಬಹು ಜನ ಸಮಾಜ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಿ ಆರ್ ರಂಗಸ್ವಾಮಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ದಿನಾಚರಣೆ ಆಚರಿಸುವ ಮೂಲಕ ಡಾ. ಬಿಆರ್ ಅಂಬೇಡ್ಕರ್ ಪ್ರತಿಭೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ವಿಶ್ವದಲ್ಲೇ ಶ್ರೇಷ್ಠವಾದದ್ದು ನಮ್ಮ ಭಾರತದ ಸಂವಿಧಾನ. ಅದರ ಆಶಯಗಳನ್ನು ಗೌರವಿಸಬೇಕಾದದ್ದು ರಕ್ಷಣೆ ಮಾಡುವಂಥದ್ದು ಭಾರತೀಯರಾದ ನಮ್ಮೆಲ್ಲ ರ ಹೊಣೆಗಾರಿಕೆಯಾಗಿದೆ. ಪ್ರಪಂಚದಲ್ಲೇ ಅತ್ಯುತ್ತಮವಾದದ್ದು ನನ್ನ ಸಂವಿಧಾನ ಇದನ್ನ ಯಥಾವತ್ತಾಗಿ ಜಾರಿಗೊಳಿಸಿದರೆ ಭಾರತ ದೇಶ 20 ವರ್ಷಗಳಲ್ಲಿ ಪ್ರಬುದ್ಧ ದೇಶವಾಗಿ ಹೊರಹೊಮ್ಮಲಿದೆ ಎಂದು ಅಂಬೇಡ್ಕರ್ ಅವರ ಮನದಾಳದ ಇಂಗಿತ ವ್ಯಕ್ತಪಡಿಸಿ 1946 ಜನವರಿ 26ರಲ್ಲಿ ಸಂವಿಧಾನದ ಕರಡನ್ನು ಅರ್ಪಿಸಿ ಭಾರತದ ನನ್ನ ಸಂವಿಧಾನದಲ್ಲಿ ರಾಜಕೀಯ ಕ್ಷೇತ್ರಕ್ಕೂ ಸಮಾನತೆಯನ್ನು ನೀಡಿದ್ದೇನೆ ಆದರೂ ಆರ್ಥಿಕವಾಗಿ ಸಾಮಾಜಿಕವಾಗಿ ಅಸಮಾನತೆಯನ್ನೂ ಹೋಗಲಾಡಿಸದಿದ್ದರೆ ಅಸಮಾನತೆ ಒಳಪಟ್ಟ ಜನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದ್ವಂಸ ಮಾಡುತ್ತಾರೆ. ಎಂದು ಅಂದೆ ಎಚ್ಚರಿಕೆ ನೀಡಿದ್ದರು ಎಂದು ತಿಳಿಸಿದರು
ಭಾರತದ ಸಂವಿಧಾನ ಪವಿತ್ರವಾದ ಗ್ರಂಥ ಇದನ್ನು ರಚಿಸಲು 2 ವರ್ಷ 11 ತಿಂಗಳು 18 ದಿನಗಳು ಶ್ರಮವಹಿಸಿ ರಚನೆ ಮಾಡಿ ಕೊಡುಗೆಯಾಗಿ ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಅಗ್ರಗಣ್ಯ ಇಂತಹ ಸಂವಿಧಾನದ ವಿಧಿಗಳು ದೇಶಕ್ಕೆ ಸ್ವಾತಂತ್ರ ಲಭಿಸಿ 73 ವರ್ಷ ಕಳೆದರೂ ಯಥಾವತ್ತಾಗಿ ಜಾರಿಯಾಗದಿರುವುದು ಇನ್ನೆಲ್ಲರ ದುರಂತ ಎಂದರು. 1950 ಜನವರಿ 26ರಲ್ಲಿ ಭಾರತ ದೇಶದಲ್ಲಿ ಸಂವಿಧಾನ ಜಾರಿಯಾಯಿತು ಇಂತಹ ಪವಿತ್ರ ಸಂವಿಧಾನವನ್ನು ಜಂತರ್ ಮಂತರ್ ನಲ್ಲಿ ಸುಡುವುದು ಬದಲಾವಣೆಯ ಮಾತನ್ನು ಆಡುವ ಮನುವಾದಿ ಸರ್ಕಾರಗಳು ಸಂವಿಧಾನ ಜಾರಿ ಮಾಡುವ ಸ್ಥಳದಲ್ಲಿ ತಿಕ್ಕಾಣಿ ಹೊಂದಿರುವುದರಿಂದ ಇದನ್ನು ಯಥಾವತ್ತಾಗಿ ಜಾರಿಗೊಳಿಸಲು ಬಹುಜನ ಸಮಾಜ ಪಾರ್ಟಿ, ಪಕ್ಷದ ಪ್ರಣಾಳಿಕೆಯಾಗಿ ಸಂವಿಧಾನವನ್ನೇ ಅಂಗೀಕರಿಸಿದ್ದೇವೆ ಇದರ ರಕ್ಷಣೆ ಹಾಗೂ ಸಂವಿಧಾನದ ಆಶಯಗಳನ್ನು ಜಾರಿ ಮಾಡುವುದೇ ನಮ್ಮ ಪಕ್ಷದ ಧ್ಯೇಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಬಿಎಸ್‍ಪಿ ಅಧ್ಯಕ್ಷ ತಾರೇಶ್, ಸಂಘಟನಾ ಕಾರ್ಯದರ್ಶಿ ರಾಜಶೇಖರ್ ಗೌರವಾಧ್ಯಕ್ಷ ಹುಚ್ಚಮ್ಮ ತಾಲೂಕು ಪ್ರಧಾನ ಕಾರ್ಯದರ್ಶಿ ಹರೀಶ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷ ರೂಪ , ಉಪಾಧ್ಯಕ್ಷೇಮಂಜುಳಾ ,ಉಪಾಧ್ಯಕ್ಷ ಮಲ್ಲೇಶ್ ಧರ್ಮೇಶ್ ಮತ್ತಿತರರು ಹಾಜರಿದ್ದರು.