ರಾಯಚೂರು: ಯುವಜನತೆ ಗುಲಾಮಿ ಮನಸ್ಥಿತಿಯ ಕುರುಹುಗಳನ್ನು ದೂರಗೊಳಿಸುವ ಮೂಲಕ ಭಾರತದ ಏಕತೆ ಮತ್ತು ಸಮಗ್ರತೆಗಾಗಿ ಕಾರ್ಯನಿರ್ವಹಿಸುವ ಮೂಲಕ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ಮುಂದಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಯೋಜನಾಕಾರಿ ಡಾ.ಸಂತೋಷಕುಮಾರ ರೇವೂರ ಹೇಳಿದರು.
ಕಾಲೇಜಿನ ದತ್ತು ಗ್ರಾಮ ತಾಲೂಕಿನ ವಡವಾಟಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಮೇರಿ ಮಿಟ್ಟಿ, ಮೇರಾ ದೇಶ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬೆಳೆಸುವ ಕೆಲಸವನ್ನು ಮಾಡಬೇಕು ಎಂದರು.
ಅಭಿಯಾನದಡಿ ಕಾಲೇಜಿನಿಂದ ದತ್ತು ಪಡೆದಿರುವ ವಡವಾಟಿ ಗ್ರಾಮದಲ್ಲಿ ಸಸ್ಯ ತೋಪು ನಿರ್ಮಿಸಬೇಕು ಎನ್ನುವ ಕೇಂದ್ರ ಸರ್ಕಾರದ ನಿರ್ದೇಶನದಂತೆ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪಂಚ್ ಪ್ರಾಣ್ ಪ್ರತಿಜ್ಞಾವಿ ಬೋಸಲಾಯಿತು. ಬಾಯಿದೊಡ್ಡಿ ಗ್ರಾ.ಪಂ. ಅಧ್ಯಕ್ಷ ಈ.ಆಂಜಿನೇಯ, ಸದಸ್ಯರಾದ ಚಿಟ್ಟಿ ನರಸಣ್ಣ, ಹನುಮಂತು, ರಾಜು, ಮಲ್ಲಯ್ಯ, ಮಲ್ಲೇಶ, ಪಿಡಿಒ ಪುಷ್ಪಲತಾ, ಮುಖ್ಯಗುರು ಚಿತ್ರಲೇಖ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.