ಬಾಗಲಕೋಟೆ: ವಿಶ್ವದ ಬೆದರಿಕೆಗೆ ಅಂಜದೆ ಭಾರತದ ಅಣು ಶಕ್ತಿಯನ್ನು ತೊರಿಸಿದವರು ಅಟಲ್ ಬಿಹಾರಿ ವಾಜಪೇಯಿ ಅವರು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರ ಶಿವಾನಂದ ಜಿನ್‌ದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭಾರತ ರತ್ನ, ದಿ.ಅಟಲ್ ಬಿಹಾರಿ ವಾಜಪೇಯಿ ಅವರ ೧೦೦ ನೇ ಜನುಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೧೯೯೮ರ ಮೇ ೧೧ರಂದು ನಡೆದ ಪ್ರೋಖ್ರಾನ್ ಪರೀಕ್ಷೆಗಳು ವೈಜ್ಞಾನಿಕ ಪರಾಕ್ರಮ ತೋರಿಸಿದರೆ, ಮೇ ೧೩ ಪೋಖ್ರಾನ್ ಪರೀಕ್ಷೆಯು ಅಟಲ್ ಬಿಹಾರಿ ವಾಜಪೇಯಿಯವರ ಮೂಲಕ ಭಾರತದ ನಿಜವಾದ ನಾಯಕತ್ವ ದೇಶ ಕಂಡಿತು. ಅವರ ನೇತೃತ್ವದ ಎನ್.ಡಿ.ಎ ಸರ್ಕಾರ ಭಾರತದ ಸಾರ್ವಭೌಮತ್ವವನ್ನು ರಕ್ಷಿಸುವ ಭಾರತದ ಹಕ್ಕನ್ನು ಸ್ಪಷ್ಪಪಡಿಸುವುದರ ಜೊತೆಗೆ ವಿಶ್ವಶಾಂತಿಯ ಪ್ರಬಲ ಪ್ರತಿಪಾದಕವಾಗಿತ್ತು. ವಾಜಪೇಯಿಯರವರು ದೇಶಭಕ್ತಿ ಇಂದಿನ ಯುವಶಕ್ತಿಗೆ ಪ್ರೇರಣೆ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ವಾಜಪೇಯಿ ಅವರ ಜನುಮ ದಿನವನ್ನು 'ಸುಶಾಸನ ದಿನ' (ಉತ್ತಮ ಆಡಳಿತ ದಿನ) ಆಚರಣೆ ಮಾಡಲಾಗುತ್ತಿದೆ. ಆಡಳಿತವನ್ನು ಪಾರದರ್ಶಕವಾಗಿಸುವುದು ಹಾಗೂ ಪರಿಣಾಮಕಾರಿಯಾಗಿಸುವುದು ಇದರ ಉದ್ದೇಶವಾಗಿದೆ ಎಂದರು.
ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಮುಖಂಡರಾದ ಬಸವರಾಜ ಯಂಕAಚಿ, ಲಕ್ಷಿ÷್ಮÃನಾರಾಯಣ ಕಾಸಟ, ರಾಜು ನಾಯ್ಕರ, ನಗರಸಭೆ ಉಪಾಧ್ಯಕ್ಷೆ ಶೋಭಾರಾವ, ಸದಸ್ಯರಾದ ಜೋತಿ ಭಜಂತ್ರಿ, ಸರಸ್ವತಿ ಕುರಬರ, ಭಾಗೀರಥಿ ಪಾಟೀಲ, ಗುಂಡುರಾವ ಶಿಂದೆ, ಶಿವಾನಂದ ಟವಳಿ, ಮುತ್ತಣ್ಣ ಬೇಣ್ಣೂರ, ಕೇಶವ ಭಜಂತ್ರಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ ಸೇರಿದಂತೆ ಅನೇಕರು ಭಾಗವಹಿಸಿದ್ದರು.