ಜಿಲ್ಲೆ

ಭಾರತ ಮಾತೆಯ ಸೇವೆಗೆ ಯುವಕರು ಮುಂದಾಗಲಿ

ನಂದೇಶ್ವರ: ಯುವಶಕ್ತಿ ಅತ್ಯಂತ ದೊಡ್ಡದು. ಯುವಕರು ಮನಸ್ಸು ಮಾಡಿದರೆ ಬೇಕಾದನ್ನು ಸಾಧಿಸಲು ಸಾಧ್ಯ. ಭಾರತ ಮಾತೆಯ ಸೇವೆ ಮಾಡಲು ಯುವಕರು ಮುಂದೆ ಬರಬೇಕು ಎಂದು ಅಯೋಧ್ಯೆ ರಾಮಮಂದಿರದ ಮೂರ್ತಿ ಶಿಲ್ಪಿ ಮೈಸೂರಿನ ಅರುಣ ಯೋಗಿರಾಜ ಹೇಳಿದರು.

ಸಮೀಪದ ಸತ್ತಿ ಗ್ರಾಮದ ಹಂಚಿನಾಳ ತೋಟದಲ್ಲಿ ಭಾನುವಾರ ಆಯೋಜಿಸಿದ್ದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪುಣ್ಯಕ್ಷೇತ್ರ ಅಥಣಿಗೆ ಭೇಟಿ ನೀಡಿದ್ದು ನನಗೆ ತುಂಬಾ ಸಂತೋಷ ತಂದಿದೆ. ಕಲೆ ಹಾಗೂ ಕಲಾವಿದರನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸಲು ಮುಧೋಳದ ನಿರಾಣಿ ಉದ್ಯಮ ಸಮೂಹದ ಸಂಸ್ಥಾಪಕ ಮುರುಗೇಶ ನಿರಾಣಿ ಹಾಗೂ ಕುಟುಂಬದವರು ಯಾವಾಗಲೂ ಮುಂದೆ ಇರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಕೀಲ ವರ್ಧಮಾನ ಯಲಗುದ್ರಿ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಹಂಚಿನಾಳ, ಬಸವರಾಜ ಮುರಕುಂಬಿ, ಮೈಸೂರಿನ ಕೆ. ಮಹೇಶ, ಸಿದ್ದಪ್ಪ ಹಂಚಿನಾಳ, ಕಾಕಾಸಾಬ ರುದ್ರಗೌಡರ, ಬಸವರಾಜ ಹಂಚಿನಾಳ, ಪ್ರಭುಲಿಂಗ ಕುಂಬಾರ, ಸಂಗಮೇಶ ಯಲಗೋಣ, ಮಹೇಶ ರುದ್ರಗೌಡರ, ನೀಲಕಂಠ ಹಂಚಿನಾಳ, ಕಿರಣ ದಾನಸೂರ, ಸುನಿಲ ಪಾಟೀಲ ತರರು ಇದ್ದರು. ಕಲಾವಿದ ಅರುಣ ಯೋಗಿರಾಜ ಅವರಿಗೆ ಅಥಣಿ ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.