ಬಾಗಲಕೋಟೆ: ಭಾರತ ಮೂಲದಲ್ಲಿ ಮಾತೃ ಪ್ರಧಾನ ರಾಷ್ಟçವಾಗಿದ್ದು, ಮಾತೆಯರು ಬಿತ್ತಿದ ಸಂಸ್ಕಾರದ ಬೀಜದಿಂದಾಗಿಯೇ ಇಲ್ಲಿ ವೀರಪುರುಷರು ಜನ್ಮತಾಳಿದ್ದಾರೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರಕ ಸಿ.ಆರ್.ನರೇಂದ್ರ ಬಣ್ಣಿಸಿದರು.
ಬವಿವ ಸಂಘದ ಆಟದ ಮೈದಾನದಲ್ಲಿ ಸೇವಾ ಭಾರತಿ ಟ್ರಸ್ಟ್ ರಜತ ಮಹೋತ್ಸವದ ಪ್ರಯುಕ್ತ ಶನಿವಾರದಿಂದ ಎರಡು ದಿನಗಳ ಕಾಲ ಜರುಗಿದ ಕಿಶೋರಿ ಸಂಗಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ವಕ್ತಾರರಾಗಿ ಮಾತನಾಡಿದರು. ದೇಶ, ಧರ್ಮದ ವಿಚಾರದಲ್ಲಿ ಹೋರಾಡಿದ ಯಾವುದೇ ಮಹಾನ್‌ಪುರುಷರ ಜೀವನಗಾಥೆಯನ್ನು ಓದಿದಾಗ ಅವರ ಸಾಧನೆಗೆ ತಾಯಂದಿರ ಪ್ರೇರಣೆ ಇರುವುದು ಕಂಡು ಬರುತ್ತದೆ. ಹೆಣ್ಣು ಹೊರಜಗತ್ತಿನಲ್ಲಿ ಅಲಂಕಾರ, ಭೋಗದ ವಸ್ತು ರೀತಿಯಲ್ಲಿ ಬಿಂಬಿಸಲಾಗುತ್ತದೆ. ಆದರೆ ಭಾರತದಲ್ಲಿ ಶ್ರದ್ಧಾ ಕೇಂದ್ರವಾಗಿ ಮಹಿಳೆಯನ್ನು ಕಾಣಲಾಗುತ್ತದೆ. ಇದು ಈ ಮಣ್ಣಿನ ಶ್ರೀಮಂತಿಕೆ ಎಂದು ಹೇಳಿದರು. ಪುರುಷ ಶಕ್ತಿ ಮುಂದೆ ಮಹಿಳೆ ದುರ್ಬಲ ಎಂದು ಬಿಂಬಿಸಲಾಗಿತ್ತು. ಭಾರತದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಅಹಲ್ಯಬಾಯಿ ಹೋಳ್ಕರ್, ಝಾನ್ಸಿ ರಾಣಿ ಲಕ್ಷಿö್ಮÃ ರಾಣಿ ಸೇರಿದಂತೆ ಅನೇಕ ವೀರಮಹಿಳೆಯರು ಅದನ್ನು ಸುಳ್ಳಾಗಿಸಿ ಮಹಿಳಾ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಕಿಶೋರಿಯರು ಭಾರತ ಭವಿಷ್ಯ. ಅವರು ಉತ್ತಮ ಸಂಸ್ಕಾರ ಹೊಂದಿದರೆ ಭಾರತೀಯ ಸಮಾಜವೂ ಸಂಸ್ಕಾರವAತವಾಗಿ ಬೆಳೆಯುತ್ತದೆ. ಆಧುನಿಕ ಭರಾಟೆಯಲ್ಲಿ ಆಚರಣೆ, ಸಂಸ್ಕೃತಿಯನ್ನು ಯುವ ಪೋಳಿಗೆ ಬಿಡಬಾರದು. ಪ್ರತಿ ಮನೆಯಲ್ಲಿ ಭಾರತೀಯ ಸಂಸ್ಕೃತಿಯ ಆಚರಣೆಗಳು ಮುನ್ನೆಲೆಗೆ ಬರಬೇಕೆಂದು ಹೇಳಿದರು.
ಸೇವಾ ಭಾರತಿ ಟ್ರಸ್ಟ್ ಸಮಾಜದಲ್ಲಿ ಅಗತ್ಯವಿರುವ ಕಡೆ ಸಂಸ್ಕಾರ ಹಾಗೂ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಜನ್ಮತಾಳಿದೆ. ಎರಡು ದಿನಗಳ ಕಿಶೋರಿ ಸಂಗಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಲಕಿಯರು ಪಾಲ್ಗೊಂಡಿದ್ದೀರಿ. ಭಾಷಣ, ಗೋಷ್ಠಿಗಳು ಎಲ್ಲವೂ ಆಗಿದೆ. ಇನ್ನು ಆಚರಣೆಗೆ ತರುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ಹೇಳಿದರು.
ಸೇವಾ ಭಾರತಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಶ್ರೀಧರ ನಾಡಿಗೇರ ಅವರು ಮಾತನಾಡಿ, ಸೇವಾ ಭಾರತಿ ಟ್ರಸ್ಟ್ ಹಿಂದುಳಿದ ಪ್ರದೇಶಗಳಲ್ಲಿ ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ಒದಗಿಸುವ ಕೆಲಸವನ್ನು ಮಾಡುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲಪು ಧ್ಯೇಯೋದ್ದೇಶದೊಂದಿಗೆ ಆರಂಭಗೊAಡ ಟ್ರಸ್ಟ್ ಯಶಸ್ಸು ಕಂಡಿದೆ ಎಂದು ಹೇಳಿದರು.
ಬವಿವ ಸಂಘದ ಕಾರ್ಯಾಧ್ಯಕ್ಷ, ರಜತ ಮಹೋತ್ಸವ ಸಮಿತಿ ಮಹಾಪೋಷಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ರಜತ ಮಹೋತ್ಸವದ ಪ್ರಯುಕ್ತ ಎರಡು ದಿನಗಳ ಕಾಲ ಅರ್ಥಪೂರ್ಣ ಕಾರ್ಯಕ್ರಮ ಜರುಗಿದೆ. ಬವಿವ ಸಂಘದಲ್ಲಿ ಇಂಥದೊAದು ಕಾರ್ಯಕ್ರಮ ಜರುಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ, ಟ್ರಸ್ಟ್ ಅಧ್ಯಕ್ಷ ಬಾಬುರಾವ್ ಘಂಟಸಾಲ, ಸೇವಾ ಭಾರತಿ ಟ್ರಸ್ಟ್ ಕಾರ್ಯದರ್ಶಿ ರಘು ಅಕಮಂಚಿ, ಹುಬ್ಬಳ್ಳಿಯ ಜಾಗೃತಿ ಸೇವಾ ಸ್ವಾವಲಂಬನೆ ಕೇಂದ್ರದ ಅಧ್ಯಕ್ಷೆ ಶಿಲ್ಪಾ ಶೆಟ್ಟರ, ಟ್ರಸ್ಟ್ನ ಪ್ರಾಂತ ಸೇವಾ ಪ್ರಮುಖ ನರಸಿಂಹ ಕುಲಕರ್ಣಿ, ರಜತ ಮಹೋತ್ಸವ ಸಮಾರೋಪ ಸಮಿತಿ ಕಾರ್ಯದರ್ಶಿ ಎಚ್.ಡಿ.ಪಾಟೀಲ, ಜಿಲ್ಲಾ ಸಮಿತಿ ಅಧ್ಯಕ್ಷ ಮಹಾಂತೇಶ ಶೆಟ್ಟರ, ಕಾರ್ಯದರ್ಶಿ ಡಾ.ಗಂಗಾಧರ ಅಂಗಡಿ ಮತ್ತಿತರರು ವೇದಿಕೆಯಲ್ಲಿದ್ದರು.