ಚಿತ್ರದುರ್ಗ: ಭಾರತ-ಪಾಕಿಸ್ತಾನದ ನಡುವೆ ಶನಿವಾರ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಗೆಲ್ಲಬೇಕೆಂದು ಕರುನಾಡ ವಿಜಯಸೇನೆ ಕಾರ್ಯಕರ್ತರು, ಹತ್ತಾರು ವಿದ್ಯಾರ್ಥಿನಿಯರು ರಾಜಮಾತೆ ಉಚ್ಚಂಗಿಯಲ್ಲಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.
ಪ್ರಧಾನಿ ನರೇಂದ್ರಮೋದಿ ಹೆಸರಿನ ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಎರಡು ದೇಶಗಳ ನಡುವೆ ನಡೆದ ಕ್ರಿಕೆಟ್ ಕದನದಲ್ಲಿ ಭಾರತ ಗೆಲ್ಲುವ ವಿಶ್ವಾಸವಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.
ವಿಜಯಸೇನೆ ಜಿಲ್ಲಾ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಅಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ರತ್ನಮ್ಮ, ಜಗದೀಶ್, ವಿಶ್ವನಾರಾಯಣಮೂರ್ತಿ, ಮಣಿಕಂಠ, ಅಖಿಲೇಶ್, ಮಹಮದ್ ರಫಿ, ಪ್ರದೀಪ್ ಆರ್.ಅವಿನಾಶ್, ಅಭಿಷೇಕ್, ನಾಗರಾಜ್ ಇದ್ದರು.