ಬೇಲೂರು : ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಮತ್ತು ಇತಿಹಾಸ ವಿಭಾಗ, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಾಸನ ಪುರಾತತ್ವ ವಸ್ತು ಸಂಗ್ರಹಾಲಯದ ಕ್ಯುರೇಟರ್ ಕುಮಾರ್ ಮಾತನಾಡಿ, ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ಪರಂಪರಾ ಓಟ, ಪ್ರಬಂಧ ಸ್ಪರ್ಧೆ, ಸ್ವಚ್ಛತೆ, ಐತಿಹಾಸಿಕ ಸ್ಥಳಗಳ ಪ್ರವಾಸ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳಿಗೆ ಪರಂಪರೆ ಮಹತ್ವ, ಶಾಸನ ಸಂರಕ್ಷಣೆ, ವಸ್ತು ಸಂಗ್ರಹಾಲಯ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಲಾಗುವುದು. ವಿದ್ಯಾರ್ಥಿಗಳು ತಮ್ಮಲ್ಲಿರುವ ಅನುಮಾನ ಹಾಗೂ ಸಂದೇಹಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪರಿಹರಿಸಿಕೊಳ್ಳಲು ಇದು ಸದಾವಕಾಶ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ನಿವೃತ್ತ ಪ್ರಾಂಶುಪಾಲ ಡಾ.ಡಿ.ಜಿ.ಕೃಷ್ಣೇಗೌಡ, ಭಾರತ ಉನ್ನತ ಐತಿಹಾಸಿಕ ಪರಂಪರೆ ಹೊಂದಿದ ದೇಶವಾಗಿದೆ. ನಾವು ವಿದೇಶ ಪ್ರವಾಸ ಸಂದರ್ಭ ಅನೇಕ ದೇಶಗಳ ಸಂಸ್ಕೃತಿ ಗಮನಿಸಿದ್ದು, ಆದರೆ ಭಾರತೀಯ ಸಂಸ್ಕೃತಿ ಇದಕ್ಕೆ ಭಿನ್ನ ಮತ್ತು ವಿಶೇಷವಾಗಿದೆ. ವಿದ್ಯಾರ್ಥಿಗಳು ನಮ್ಮ ದೇಶದ ಪರಂಪರೆಯನ್ನು ಉಳಿಸಿ ಬೆಳೆಸಿ ಕಾಪಾಡುವಲ್ಲಿ, ಪಾರಂಪರಿಕ ಸ್ಥಳಗಳನ್ನು ಸಂರಕ್ಷಿಸುವಲ್ಲಿ ಮಹತ್ವದ ಪಾತ್ರ ನಿರ್ವವಹಿಸಬೇಕು ಎಂದರು.
ಸಂಶೋಧಕಿ ಹಾಗೂ ಸಂಪನ್ನಮೂಲ ವ್ಕತಿ ಡಾ.ಶಿಲ್ಪ ಅಜ್ಜಂಪುರವರು, ಭಾರತೀಯ ಪರಂಪರೆ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅಲ್ಲದೆ ಪರಂಪರೆ ಸಂರಕ್ಷಣೆ ವಿಧಾನಗಳನ್ನು ವಿವರಿಸುತ್ತಾ ಶಾಸನಗಳ ಮಹತ್ವ, ಪ್ರಾಚ್ಯ ವಸ್ತುಗಳ ರಕ್ಷಣೆ ಹಾಗೂ ಅವುಗಳ ಮಹತ್ವದ ಬಗೆಗೆ ವಿದ್ಯಾರ್ಥಿಗಳು ತಮ್ಮ ನೆರೆ ಹೊರೆಯಲ್ಲಿ ಜಾಗೃತಿ ಮೂಡಿಸಬೇಕೆಂದರು.
ಪ್ರಾಂಶುಪಾಲ ಪುಟ್ಟರಾಜು, ಸಂಪನ್ಮೂಲ ವ್ಯಕ್ತಿ ಕುಮಾರಿ ಪಲ್ಲವಿ, ಇತಿಹಾಸ ವಿಭಾಗದ ಪ್ರೊ.ರತ್ನಾವತಿ, ಪ್ರೊ.ವೀರಭದ್ರಪ್ಪ, ಜ್ಯೋತಿ, ಸುಗುಣ, ಪ್ರೇಮಾವತಿ, ಮೋಹನಕುಮಾರ್, ರಾಘವೇಂದ್ರ, ರೇವಣ್ಣ, ಶೇಖರ್, ಪದ್ಮೇಗೌಡ, ಮಹೇಶ್, ಸಿದ್ದಲಿಂಗಪ್ಪ, ಸುರೇಶ್, ಲೋಕೇಶ್, ಸುಶ್ಮಿತಾ, ಅನೂಷಾ, ಆಡಳಿತ ಸಿಬ್ಬಂದಿ ಹಾಗೂ ಇತರರು ಭಾಗವಸಿದ್ದರು