ಕಲಬುರಗಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ರ‍್ಕಾರ ೧೧ ರ‍್ಷದ ಉತ್ತಮ ಆಡಳಿತದ ಪರಿಣಾಮ ಆರ್ಥಿಕವಾಗಿ ೧೦ನೇ ಸ್ಥಾನದಲ್ಲಿದ್ದ ಭಾರತವು ಜಪಾನ್ ಹಿಂದಿಕ್ಕಿ, ೪ನೇ ಸ್ಥಾನಕ್ಕೆ ಬಂದಿದೆ. ಶೀಘ್ರ ೩ನೇ ಸ್ಥಾನ ಅಲಂಕರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡ ವಿಕಸಿತ ಭಾರತದ ಅಮೃತ ಕಾಲ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣಕ್ಕಾಗಿ ೧೧ ರ‍್ಷ ವಿಶೇಷ ಕರ‍್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ೨೦೪೭ರವರೆಗೆ ವಿಕಸಿತ ಭಾರತದ ಸಂಕಲ್ಪ ದೃಷ್ಟಿಯಿಂದ ಭಾರತ ರ‍್ಥಿಕವಾಗಿ ಅಗ್ರಸ್ಥಾನ ಹೊಂದಲಿದೆ ಎಂದರು.
೧೧ ರ‍್ಷದ ಆಡಳಿತದಲ್ಲಿ ಮೋದಿ ರ‍್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ, ಆಯುಷ್ಮಾನ್ ಭಾರತ, ಜಲಜೀವನ ಮಿಷನ್ ಸೇರಿ ಹಲವು ಯೋಜನೆ ಜಾರಿಗೆ ತಂದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಮುಟ್ಟಿಸಿದೆ. ೧೧ ರ‍್ಷದ ಆಡಳಿತದಲ್ಲಿ ೩೪ ಪ್ರತಿಶತದಲ್ಲಿ ೨೭ ಪ್ರತಿಶತ ಕಡು ಬಡವರು ಬಡತನ ರೇಖೆಯಿಂದ ಹೊರಬಂದಿದ್ದು, ಕೇವಲ ಶೇ.೭.೫ ಕಡು ಬಡವರು ದೇಶದಲ್ಲಿದ್ದಾರೆ ಎಂದರು.
ವಿಶ್ವವೇ ಭಾರತದ ಪರಿರ‍್ತನೆ ನೋಡುತ್ತಿದೆ. ದೇಶದ ೧೪೮ ಕೋಟಿ ಜನರಲ್ಲಿ ಬದಲಾವಣೆಯಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪರಿಣಾಮ ಭಾರತ ರ‍್ಥಿಕವಾಗಿ ಸಬಲೀಕರಣಗೊಳ್ಳುತ್ತಿದೆ. ರಾಜಕಾರಣಕ್ಕೆ ಅಂಟಿಕೊಳ್ಳದೆ ಪಾರರ‍್ಶಕವಾಗಿ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ದೇಶಭಕ್ತ ಹಾಗೂ ಪರಿರ‍್ತಕ ಎಂದು ಬಣ್ಣಿಸಿದರು.
ಅಭಿಯಾನದ ಸಂಯೋಜಕ ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್, ಮಾಜಿ ಸಂಸದ ಉಮೇಶ ಜಾಧವ್, ಭಗವಂತ ಖೂಬಾ ೧೧ ರ‍್ಷಗಳ ಸಾಧನೆ ಕುರಿತು ಮಾತನಾಡಿದರು. ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಸುಭಾಷ ಗುತ್ತೇದಾರ್, ಓಬಿಸಿ ರಾಜ್ಯ ಕರ‍್ಯರ‍್ಶಿ ಅವ್ವಣ್ಣ ಮ್ಯಾಕೇರಿ, ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ಶಿವಯೋಗಿ ನಾಗೇನಹಳ್ಳಿ, ಇಂದಿರಾ ಶೆಟ್ಟಿ, ಶರಣಪ್ಪ ತಳವಾರ, ಚಂದಮ್ಮ ಪಾಟೀಲ್, ರ‍್ಷಾನಂದ ಗುತ್ತೇದಾರ ಇತರರಿದ್ದರು.