ಎನ್.ಆರ್.ಪುರ: ಕಡಹಿನಬೈಲು ಗ್ರಾಪಂ ಮಾಕೋಡಿನ ಟಿ.ಎಸ್.ಜಿನೀಶ್ ಬೆಂಗಳೂರಿನ ಸಿಂಗಸಂದ್ರದಲ್ಲಿ ಭಾನುವಾರ ನಡೆದ ಅಪ್ಪು ಕ್ಲಾಸಿಕ್-ಸೆಕೆಂಡ್ ಓಪನ್ ಕರ್ನಾಟಕ ಡೆಡ್ ಲಿಫ್ಟ್ ಆ್ಯಂಡ್ ಫಿಟ್ನೆಸ್ ಚಾಲೆಂಜ್ ಛಾಂಪಿಯನ್ ಶಿಪ್‌ನ 66 ಕೆ.ಜಿ. ವಿಭಾಗದಲ್ಲಿ 222.5 ಕೆ.ಜಿ. ಭಾರ ಎತ್ತುವುದರ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ವರ್ಷವೂ ಬೆಂಗಳೂರಿನ ಬೇಗೂರಿನಲ್ಲಿ ನಡೆದ ಓಪನ್ ಕರ್ನಾಟಕ ಡೆಡ್ ಲಿಫ್ಟ್ ಆ್ಯಂಡ್ ಫಿಟ್ನೆಸ್ ಚಾಂಪಿಯನ್ ಷಿಪ್ ನ 66 ಕೆ.ಜಿ. ವಿಭಾಗದಲ್ಲಿ 220 ಕೆ.ಜಿ. ಎತ್ತುವುದರ ಮೂಲಕ ಪ್ರಥಮ ಸ್ಥಾನ ಪಡೆದಿದ್ದರು.ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಸತತವಾಗಿ 2 ನೇ ಬಾರಿಗೆ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಟಿ.ಎಸ್.ಜಿನೀಶ್ ಮಾಕೋಡಿನ ಕೃಷಿಕ ತೇಲಾಕಾಡನ್ ಶೈಜು ಅವರ ಪುತ್ರ.