ಜಿಲ್ಲೆ

ಭಾಜಪ ವೈದ್ಯಕೀಯ ಪ್ರಕೋಷ್ಠದ ಸಭೆ

ವಿಜಯಪುರ: ಭಾರತೀಯ ಜನತಾ ಪಾರ್ಟಿ ವಿಜಯಪುರ ಹಾಗೂ ನಗರ ಮಂಡಲದ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಕಾರ್ಯಕಾರಣಿ ಸಭೆಯು ವಿಜಯಪುರದ ಅಪ್ಸರಾ ಟಾಕೀಜ್ ಹಾಲ್ ನಲ್ಲಿಂದು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕರಾದ ಡಾ. ಬಾಬು ರಾಜೇಂದ್ರ ನಾಯಕ್ ವಹಿಸಿಕೊಂಡಿದ್ದರು. ಬೆಳಗಾವಿ ವಿಭಾಗದ ಸಂಘಟನಾ ಮಹಾ ಮಂತ್ರಿಗಳಾದ ಶ್ರೀ ಪ್ರಕಾಶ ಅಕ್ಕಲಕೋಟರವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ರು. ವೈದ್ಯರು ದೇವರ ಸ್ವರೂಪಿಗಳಾಗಿದ್ದಾರೆ. ವೈದ್ಯೋ ನಾರಾಯಣ ಹರಿ, ಸಮಾಜವು ನಿಮ್ಮನ್ನು ಸಂಭೋದಿಸುತ್ತದೆ. ಸಮಾಜದ ನಾಗರಿಕರು ನಿಮ್ಮ ವೃತ್ತಿಯ ಹಾಗೂ ನಿಮ್ಮ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುತ್ತಾರೆ. ತಾವುಗಳು ಕೊಟ್ಟ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ವ ವ್ಯಾಪಿ ಸರ್ವ ಸ್ಪರ್ಶಿ ವೇದ ಘೋಷದೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕಾರ್ಯವನ್ನು ತಾವುಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು. ಜೊತೆಗೆ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು. ಅದೇ ರೀತಿ ಬೆಳಗಾವಿ ವಿಭಾಗದ ಪ್ರಭಾರಿಗಳಾದ ಚಂದ್ರಶೇಖರ ಕವಟಗಿರವರು ಮಾತನಾಡಿ ವೈದ್ಯಕೀಯ ಪ್ರಕೋಷ್ಠದ ಸರ್ವ ಸದಸ್ಯರು ಕರೋನಾ ಲಸಿಕೆಯ ಬಗ್ಗೆ ಹತ್ತು ಹಲವಾರು ಯೋಜನೆಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಜೋಗುರ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಕಲಾದಗಿ, ಭಾಜಪದ ನಗರ ಮಂಡಲದ ಅಧ್ಯಕ್ಷರಾದ ಮಳುಗೌಡ ಪಾಟೀಲ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಪಾಪುಸಿಂಗ ರಜಪೂತ, ಭರತ ಕೋಳಿ, ಡಾ. ವಿಶ್ವನಾಥ ಪತ್ತಾರ, ಡಾ. ಪರಶುರಾಮ ಒಡೆಯರ, ಡಾ. ವಾಸುದೇವ ಢಗೆ, ಡಾ. ಸಂಗಮೇಶ ಗೂಗಿಹಾಳ, ಡಾ. ಮೇಸ್ತ್ರಿ, ಶ್ರೀ ಪ್ರಭು ಮಂಕಣಿ ಹಾಗೂ ಮಂಡಲ ಪ್ರಕೋಷ್ಠದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು. ಮಂಡಲದ ಸಹ ಸಂಚಾಲಕರಾದ ಡಾ. ಸಂಜು ಶಿಳ್ಳಿನ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.