ಜಿಲ್ಲೆ

ಭಾಗ್ಯಲಕ್ಷಿ$್ಮಯರ ಖಾತೆಗೆ ಬಂತು ಹಣ!

2006 &07ರಲ್ಲಿ ಪ್ರಾರಂಭಿಸಿದ ಯೋಜನೆ, ಮೊದಲ ಹಂತದಲ್ಲಿ 32 ಸಾವಿರ ರೂ. ಜಮೆ

ಚಿಕ್ಕನಾಯಕನಹಳ್ಳಿ: ಈ ಹಿಂದಿನ ಸರ್ಕಾರ 2006 &2007ರಲ್ಲಿ ಪ್ರಾರಂಭಿಸಿದ ಭಾಗ್ಯಲ್ಮ ಬಾಂಡ್​ ಯೋಜನೆ ಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿದ್ದು, ಬಾಂಡ್​ಗಳ ಅವಧಿ ಪರಿಶೀಲಿಸಿ ಹಣ ಪಡೆಯಬಹುದಾಗಿದೆ.

ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯವಿವಾಹ ತಡೆಗಟ್ಟುವ ಹಿನ್ನೆಲೆಯಲ್ಲಿ 2006&2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್​.ಯಡಿಯೂರಪ್ಪ ಅವರು ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳ ಹೆಸರಿಗೆ ಒಂದು ಲಕ್ಷ ಮೊತ್ತದ ವಿಮೆ ಸೌಲಭ್ಯ ಕಲ್ಪಿಸಿದ್ದರು. ಅದರಂತೆ ಹೆಣ್ಣು ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಅದರ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಈಗ 18 ವರ್ಷ ತುಂಬಿದ ಹೆಣ್ಣು ಮಕ್ಕಳು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಮೊದಲ ಹಂತದಲ್ಲಿ 32 ಸಾವಿರ ರೂ. ಖಾತೆಗಳಿಗೆ ಜಮಾ ಆಗುತ್ತಿದ್ದು, ಉಳಿದ ಮೊತ್ತ ಹಂತಹಂತವಾಗಿ ಜಮೆಯಾಗಲಿದೆ ಎಂದು ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ. ಈ ಯೋಜನೆಯಲ್ಲಿ ತಾಲೂಕಿನಲ್ಲಿ 2006&2007ರಲ್ಲಿ ಒಟ್ಟು 1196 ಪಲಾನುಭವಿಗಳು ನೋಂದಣಿ ಮಾಡಿ ಬಾಂಡ್​ ಪಡೆದಿದ್ದರು. ಇದರಲ್ಲಿ 863 ಸೂಪರ್​ ವೈಸರ್​ಗಳಲ್ಲಿ ನೋಂದಣಿ ಮಾಡಿಸಿದ್ದು, ಇನ್ನು 5 ಬಾಂಡ್​ಗಳು ಸಿಡಿಪಿಒಗಳ ಒಪ್ಪಿಗೆ ಹಂತದಲ್ಲಿವೆ. 187 ಬಾಂಡ್​ಗಳು ಈಗಾಗಲೇ ಸಿಡಿಪಿಒ ಅವರಿಂದ ಅನುಮತಿಸಿದ್ದು, ಒಟ್ಟು 671 ಡಿಡಿ ಅವರ ಒಪ್ಪಿಗೆ ಹಂತದಲ್ಲಿದ್ದರೆ, 640 ಬಾಂಡ್​ಗಳನ್ನು ಎಲ್​ಐಸಿ ಕಂಪನಿಗೆ ರವಾನಿಸಲಾಗಿದೆ.

5 ಬಾಂಡ್​ಗಳಿಗೆ ಕೆಲ ಕಾರಣಗಳಿಂದ ಹಣ ಜಮೆಯಾಗುವುದು ವಿಳಂಬವಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯೋಜನೆ ಸದ್ಬಳಕೆಯಾಗಲಿ: ಹೆಣ್ಣು ಮಕ್ಕಳಿಗಾಗಿ ಮಾಡಿದ ಈ ಭಾಗ್ಯಲ್ಮಯೋಜನೆ ಯಿಂದ ಈಗ 32,000 ಹಣ ನಮ್ಮ ಖಾತೆಗೆ ಜಮೆ ಆಗಿದ್ದು ತುಂಬಾ ಖುಷಿಯಾಗಿದೆ. ಉಳಿದವರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಾಂಡ್​ ಲಾನುಭವಿ ವಿದ್ಯಾನಗರ ನಿವಾಸಿ ವಿದ್ಯಾರ್ಥಿನಿ ಶ್ರೇಯಾ ಹೇಳಿದರು.

ಬಾಂಡ್​ದಾರರಿಗೆ ಮಾಹಿತಿ ರವಾನೆ: ಈಗಾಗಲೇ ಅವಧಿ ಮುಗಿದ ಬಾಂಡ್​ಗಳ ಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದೆ. ಇನ್ನು ನಮ್ಮ ಹಂತದಲ್ಲಿ ಈಗಾಗಲೇ ಬಾಂಡ್​ ಪಡೆದವರಿಗೆ ಅವಧಿ ಮುಗಿದಿದ್ದರೆ ನಮ್ಮ ಇಲಾಖೆಯಿಂದ ಮಾಹಿತಿ ತಿಳಿಸಲಾಗುತ್ತಿದೆ. ಅದಕ್ಕೆ ಸಂಬಂಧಪಟ್ಟಂತೆ ಆನ್​ಲೈನ್​ನಲ್ಲಿ ಕಡತಗಳನ್ನು ವಿಲೇವಾರಿ ಮಾಡಿ ಮೇಲಧಿಕಾರಿಗಳಿಗೆ ರವಾನಿಸಲಾಗುತ್ತದೆ. ಅಲ್ಲಿಂದ ಎಲ್​ಐಸಿ ಕಚೇರಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿಂದ ನೇರವಾಗಿ ಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗುವ ಪ್ರಕ್ರಿಯೆ ಆಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಹೊನ್ನಪ್ಪ ಮಾಹಿತಿ ನೀಡಿದರು.