ಕಲಬುರಗಿ: ಕರ್ನಾಟಕ P್ಷÀತ್ರಿಯ ಮರಾಠ ಪರಿಷತ್ತಿನ ಸುವರ್ಣ ಮಹೋತ್ಸವ ನಿಮಿತ್ತ ನಗರದ ಶಹಾಬಜಾರ್ ರಸ್ತೆಯಲ್ಲಿನ ಮಾಯಿ ಮಂದಿರದಲ್ಲಿ ಫೆ.೧೨ರಿಂದ ೧೮ರವರೆಗೆ ನಿತ್ಯ ಸಂಜೆ ೪ರಿಂದ ೭ರವರೆಗೆ ಶ್ರೀಮದ್ ಭಾಗವತ್ ಕಥಾ ಜ್ಞಾನಯಜ್ಞ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ದೀಪಕ ಘನಾತೆ ತಿಳಿಸಿದರು.
ಶ್ರೀ ದತ್ತ ಮಂದಿರ ದೇವಾಲಯ ಟ್ರಸ್ಟ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿ¯್ಲÁ ಘಟಕದ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಹಾರಾಷ್ಟçದ ಅಹಲ್ಯಾಬಾಯಿ ನಗರದ ದುರ್ಗಾಪ್ರಸಾದ ಮಹಾರಾಜ ತಿಡಕೆ (ದೇವಳಾಲಿಕರ್) ಕಥಾ ಪ್ರವಚನ ನೀಡಲಿz್ದÁರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿತ್ಯ ಬೆಳಗ್ಗೆ ೯ರಿಂದ ಮಧ್ಯಾಹ್ನ ೧೨ರವರೆಗೆ ಕಾಲಾ ಕೀರ್ತನೆ ನಂತರ ಮಹಾಪ್ರಸಾದ ವ್ಯವಸ್ಥೆ ಇರಲಿದೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ಕಥಾ ಸಪ್ತಾಹದಲ್ಲಿ ಪ್ರಮುಖರಾದ ಡಾ.ದಿನಕರ್ ಮೋರೆ, ಸೂರ್ಯಕಾಂತ ಕದಂ, ಸುಭಾಷ ಜಾಧವ್, ಪ್ರತಾಪರಾವ ಕಾಕಡೆ, ಶಾಮರಾವ ಜಗತಾಪ, ಸುಭಾಷ ಪಾಟೀಲ್, ಮಾಣಿಕರಾವ ಶಿಂಧೆ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಮುಖರಾದ ರಾಜು ಕಾಕಡೆ, ಲಕ್ಷö್ಮಣರಾವ ಮಸಾಳಿ, ಪ್ರಭಾಕರ ನಾಗರಾಳೆ, ಶಿವಾಜಿ ಸಾವಂತ, ಆರ್.ಬಿ.ಜಗದಾಳೆ ಇತರರಿದ್ದರು.
ಅದ್ದೂರಿ ಶಿವಾಜಿ ಜಯಂತಿ ೧೯ರಂದು: ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಮರಾಠ ಸಮಾಜ ಸೇರಿ ಶಿವಾಜಿ ಅಭಿಮಾನಿಗಳ ಸಹಯೋಗದಲ್ಲಿ ಫೆ.೧೯ರಂದು ಶಿವಾಜಿ ಮಹಾರಾಜರ ಅದ್ದೂರಿ ಜಯಂತ್ಯುತ್ಸವ ಆಚರಿಸಲಾಗುವುದು ಎಂದು ರಾಮಚಂದ್ರ ಜಗದಾಳೆ ತಿಳಿಸಿದರು. ಬೆಳಗ್ಗೆ ೯ಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ, ಭಾವಚಿತ್ರದ ಜತೆಗೆ ನಗರದ ಅಯ್ಯರವಾಡಿ ಅಂಭಾಭವಾನಿ ಮಂದಿರದಿAದ ಜಯಂತಿ ನಡೆಯುವ ಕನ್ನಡ ಭವನದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಶಿವಾಜಿ ಮಹಾರಾಜರ ದರ್ಬಾರದಲ್ಲಿದ್ದ ಛತ್ರಿ ಛಾಮರ, ಕುದುರೆ, ವಾದ್ಯ, ವೈಭವ ಇರಲಿದೆ. ಮಧ್ಯಾಹ್ನ ೧ಗಂಟೆಗೆ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.