ಕಲಬುರಗಿ: ಪವಿತ್ರ ಉಪನ್ಯಾಸಕ ವೃತ್ತಿಯಿಂದ ವಿದ್ಯರ‍್ಥಿಗಳ ಭವಿಷ್ಯ ರೂಪಿಸಬಹುದು. ಇಂತಹ ಮಹತ್ವದ ಜವಾಬ್ದಾರಿ ಉಪನ್ಯಾಸಕರ ಮೇಲಿದ್ದು, ಪ್ರತಿ ವಿದ್ಯರ‍್ಥಿಯ ಅಂಕದ ಹಿಂದೆ ಶ್ರಮ ಇರುತ್ತದೆ. ಮೌಲ್ಯಮಾಪನ ಸೂ$್ಮ ಮತ್ತು ಜವಾಬ್ದಾರಿಯುತವಾಗಿರುತ್ತದೆ ಎಂದು ಡಿಡಿಪಿಯು ಅಶೋಕ ಶಾಸ್ತ್ರಿ ಹೇಳಿದರು. ನಗರದ ದಿಶಾ ಪಿಯು ವಿಜ್ಞಾನ ಕಾಲೇಜಿನಲ್ಲಿ ೨೦೨೫ನೇ ಸಾಲಿನ ದ್ವೀತಿಯ ಪಿಯುಸಿ ಇಂಗ್ಲಿಷ್ ವಿಷಯದ ಮೌಲ್ಯಮಾಪನ ಕೇಂದ್ರದಲ್ಲಿ ವಯೋನಿವೃತ್ತ ಉಪನ್ಯಾಸಕರಿಗೆ, ಪ್ರಾಚರ‍್ಯರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ದಿಶಾ ಪಿಯು ವಿಜ್ಞಾನ ಕಾಲೇಜಿನ ಸಂಸ್ಥಾಪಕ ಅಧ್ಯ ಶಿವಾನಂದ ಖಜರ‍್ಗಿ ಮಾತನಾಡಿ, ಇಂಗ್ಲಿಷ್ ೨೬ ಅರ ಹೊಂದಿದ್ದು, ಪ್ರಪಂಚವನ್ನು ಆಳುತ್ತಿದೆ. ಹಲವರಿಗೆ ಅನ್ನದ ಭಾಷೆಯಾಗಿದೆ. ಭಾಷೆ ಉಳಿಯಲು ಅದನ್ನು ಅನ್ನದ ಭಾಷೆ ಮಾಡಬೇಕು ಎಂದರು. ಕಲ್ಯಾಣ ರ‍್ನಾಟಕ ಶರಣರ, ಸಂತರ ಪವಿತ್ರ ನೆಲವಾಗಿದ್ದು, ಕಾಯಕ, ದಾಸೋಹದ ಅವರ ಪಥದಲ್ಲಿ ನಡೆಯುವುದೇ ಆಗಿದೆ. ಉಪನ್ಯಾಸಕರು ವಿದ್ಯರ‍್ಥಿಗಳನ್ನು ಮಕ್ಕಳಂತೆ ಪ್ರೀತಿಸಿದರೆ ಅವರು ಭವಿಷ್ಯದಲ್ಲಿ ಅನ್ನ ಹಾಕುತ್ತಾರೆ ಎಂದರು. ಇಂಗ್ಲಿಷ ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥ ಶ್ರೀಶೈಲಪ್ಪ ಬೋನಾಳ ಮಾತನಾಡಿ, ಪ್ರಾಮಾಣಿಕ ಮೌಲ್ಯಮಾಪನದಿಂದ ಮಕ್ಕಳಿಗೆ ನ್ಯಾಯ ಒದಗಿಸಬಹುದು. ದಿಶಾ ಕಾಲೇಜಿನಲ್ಲಿನ ಮೌಲ್ಯಮಾಪನ ಕೇಂದ್ರವೂ ಅತ್ಯಂತ ಸಹಕಾರಿ ಆಗಿತ್ತು. ವಿಶೇಷವಾಗಿ ಆರಂಭದಿಂದಲೂ ಮೌಲ್ಯಮಾಪಕರಿಗೆ ಊಟ ನೀಡಿ, ಮಾದರಿ ನಡೆ ಅನುಸರಿಸಲಾಗಿದೆ ಎಂದರು. ಮೌಲ್ಯಮಾಪನ ಪರೀಕ್ಷೆ ಪರಿವೀಕ್ಷಕ ಸುರೇಶ ಅಕ್ಕಣ್ಣ ಮಾತನಾಡಿ, ಮೌಲ್ಯಮಾಪನ ಅಡೆತಡೆ ಇಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ. ಮೌಲ್ಯಮಾಪಕರು, ಸಹಾಯಕ ಮೌಲ್ಯಮಾಪಕರು ಶಿಸ್ತು, ಪ್ರಾಮಾಣಿಕವಾಗಿ ಕರ‍್ಯನರ‍್ವಹಿಸುತ್ತಿದ್ದಾರೆ. ಆರಂಭದಿಂದಲೂ ಊಟ, ದಿನವಿಡೀ ಚಹಾ ವ್ಯವಸ್ಥೆ ಮಾಡಿದ್ದು, ದಿಶಾ ಕಾಲೇಜಿನಲ್ಲಿ ಕೇಂದ್ರದಲ್ಲಿ ಮಾತ್ರ ಎಂದು ಬಣ್ಣಿಸಿದರು. ನಿವೃತ್ತಿ ಹೊಂದಲ್ಲಿರುವ ಡಿಡಿಪಿಯು ಅಶೋಕ ಶಾಸ್ತ್ರಿ, ಸುರೇಶ ಅಕ್ಕಣ್ಣ, ಶ್ರೀಶೈಲ ಬೋನಾಳ, ಪಂಡಿತರಾವ ಪವರ, ಇಮ್ಯಾನುವೆಲ್ ರಾಜ್, ರಾಜೇಂದ್ರ ರಂಗದಾಳ, ಗಿರಿಧರ ಜೋಶಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚರ‍್ಯ ಸಂತೋಷ ಜಕಾಪುರೆ ಇತರರಿದ್ದರು. ನಂದಿನಿ ಪ್ರರ‍್ಥನಾ ಗೀತೆ ಹಾಡಿದರು. ಮಲ್ಲಿಕರ‍್ಜುನ ಆನಂದಕ್ಕರ ನಿರೂಪಣೆ ಮಾಡಿದರು. ಸುನಿಲ್ ವಲ್ಲಾಪುರೆ ವಂದಿಸಿದರು.
ಆಧುನಿಕತೆ ವೇಗದಲ್ಲಿ ಉಪನ್ಯಾಸಕರು ಮತ್ತು ವಿದ್ಯರ‍್ಥಿಗಳಲ್ಲಿ ಅಧ್ಯಯನದ ಕೊರತೆ ಕಾಣುತ್ತಿದೆ. ಅದನ್ನು ಸುಧಾರಿಸಿಕೊಳ್ಳುವುದು ಅನಿವರ‍್ಯ. ಕಲ್ಯಾಣ ರ‍್ನಾಟಕ ಸಾಂಸತಿಕವಾಗಿ ಶ್ರೀಮಂತ ನೆಲವಾಗಿದ್ದು, ಬೌದ್ಧಿಕತೆಯ ಕೊರತೆ ಇಲ್ಲ. ಅದನ್ನು ಸಾಧ್ಯ ಮಾಡಲು ಒಟ್ಟುಗೂಡಿ ಕರ‍್ಯ ಮಾಡಬೇಕಿದೆ. > ಶಿವಾನಂದ ಖಜರ‍್ಗಿ, ಸಂಸ್ಥಾಪಕ ದಿಶಾ ವಿಜ್ಞಾನ ಕಾಲೇಜು ಕಲಬುರಗಿ