ಶಹಾಪುರ: ಜಿಲ್ಲೆಯ ವಿವಿಧೆಡೆ ವಿವಿಧ ಸಮುದಾಯ ಭವನ ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 10 ರೂ. ಅನುದಾನ ಮಂಜೂರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ನಗರದಲ್ಲಿ ತಾಲೂಕು ಕುರುಬ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಗರದ ಬಸವ ಭವನ ನಿರ್ಮಾಣಕ್ಕೆ 2 ಕೋಟಿ, ನಗರದ ಶಿಕ್ಷಕ ಭವನಕ್ಕೆ 50 ಲಕ್ಷ, ಯಾದಗಿರಿ ಸಿದ್ದಸಂಪದ ಚಾರಿಟೇಬಲ್ ಟ್ರಸ್ಟ್ ಸಾಂಸ್ಕೃತಿಕ ಭವನಕ್ಕೆ 50 ಲಕ್ಷ, ವಡಗೇರ ತಾಲೂಕಿನ ಹೈಯಾಳ ಬಿ. ಗ್ರಾಮದ ಹೈಯಾಳ ಲಿಂಗೇಶ್ವರ ದೇವಸ್ಥಾನಕ್ಕೆ 50 ಲಕ್ಷ, ಸುರಪುರ ತಾಲೂಕಿನ ಯಕ್ತಾಪುರ ಗುತ್ತಿ ಬಸವೇಶ್ವರ ದೇವಸ್ಥಾನದ ಟ್ರಸ್ಟ್ಗೆ 50 ಲಕ್ಷ, ಕಲಬುರಗಿ ಅಖಿಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಅಭಿವೃದ್ದಿ ಸಂಸ್ಥೆಗೆ 1.50 ಕೋಟಿ ರೂ. ಸೇರಿ ಹೀಗೆ ವಿವಿಧ ದೇವಸ್ಥಾನ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಹೇಳಿದರು.
ನಗರದಲ್ಲಿ ಕನಕ ಭವನ ನಿರ್ಮಾಣಕ್ಕೆ 2 ಕೋಟಿ ರೂ.ವೆಚ್ಚದಲ್ಲಿ ಅನುದಾನ ಮಂಜೂರಿಗೊಳಿಸಿದ ಹಿನ್ನೆಲೆಯಲ್ಲಿ ಕುರುಬ ಸಮಾಜದ ಮುಖಂಡರು ಕಂಬಳಿ ಹಾಕಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಈ ವೇಳೆ ತಾಲೂಕು ಅಧ್ಯಕ್ಷ ಡಾ.ಭೀಮನ್ಣ ಮೇಟಿ ಮಾತನಾಡಿದರು. ಶಿವುಮಾಹಂತ ಚಂದಾಪುರ, ಭೀಕ್ಷಣಗೌಡ ಕಾಡಂಗೇರ, ಈರಣ್ಣಗೌಡ ಮಲ್ಲಾಬಾದಿ, ಶಾಂತಗೌಡ ನಾಗನಟಿಗಿ, ಗೊಲ್ಲಾಳೆಪ್ಪ, ಮಲ್ಲಣ್ಣ ಇಟಗಿ, ತಿರುಪತಿ ಬಾಣತಿಹಾಳ, ಶರಬಣ್ಣ ರಸ್ತಾಪುರ, ರಾಯಪ್ಪ ಚಲುವಾದಿ, ನಾನೇಗೌಡ ಸೈದಾಪುರ, ಮಾನಪ್ಪ ಕಳಸಪ್ಪಗೌಡ ಶಖಾಪುರ, ಶರಣಗೌಡ ಚಾಮನಾಳ, ರವಿ ರಾಜಾಪುರ, ಮಲ್ಲಣಗೌಡ ತಿಪ್ಪನಹಳ್ಳಿ, ಭೀಮನಗೌಡ ಪಾಟೀಲ್ ಸೇರಿದಂತೆ ಅನೇಕರು ಇದ್ದರು.