ಜಿಲ್ಲೆ

ಭರ್ತಿಯಾದ ಭೀಮಾ ಬ್ಯಾರೇಜ್ 62 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಅಫಜಲಪುರ: ಸೊನ್ನ ಭೀಮಾ ಬ್ಯಾರೇಜ್ಗೆ ಸತತವಾಗಿ ವಾರದಿಂದ ಮಹಾರಾಷ್ಟ್ರ ಮತ್ತು ಭೀಮಾ ಬ್ಯಾರೇಜ್ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಬ್ಯಾರೇಜ್ ಭರ್ತಿಯಾಗಿದ್ದು, ಉಜನಿ ಡ್ಯಾಂನಿಂದ ನೀರು ಬಿಡುತ್ತಿರುವುದರಿಂದ ಬ್ಯಾರೇಜ್ನ ಒಂಭತ್ತು ಗೇಟ್ಗಳ ಮೂಲಕ ಶನಿವಾರ 62ಸಾವಿರ ಕ್ಯೂಸೆಕ್ ನೀರು ಹೊರಗಡೆ ಬಿಡಲಾಗಿದೆ ಎಂದು ಭೀಮಾ ಏತ ನೀರಾವರಿ ಕಾರ್ಯ ಪಾಲಕ ಅಭಿಯಂತರ ಅಶೋಕ ಕಲಾಲ್ ತಿಳಿಸಿದ್ದಾರೆ. ಸೊನ್ನ ಬ್ಯಾರೇಜ್ ಕೆಳ ಭಾಗದಲ್ಲಿ ಬರುವ ಅಫಜಲಪುರ, ಜೇವರ್ಗಿ , ಚಿತ್ತಾಪುರ ತಾಲೂಕಿನ ಗ್ರಾಮಗಳ ರೈತರು ನದಿಯ ದಡಕ್ಕೆ ಬರಬಾರದು ಜಾನುವಾರುಗಳನ್ನು ಬಿಡಬಾರದು ಎಂದು ಕೋರಿದ್ದಾರೆ.