ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಐಐಐಟಿ ಉದ್ಘಾಟನೆಗೂ ಮೊದಲು ಮಧ್ಯಾಹ್ನದ ಊಟ ಸವಿದರು. ರಾಷ್ಟ್ರಪತಿ ಭವನದ ಸಿಬ್ಬಂದಿಯೇ ಸಿದ್ಧಪಡಿಸಿದ್ದ ಪುಲ್ಕಾ, ಬೆಂಡಿ ್ರೈ, ಸೊಪ್ಪು, ವಿವಿಧ ಪಲ್ಯಗಳು, ಪನ್ನೀರು, ದಾಲ್, ಪಾಪಡ್, ಬಿರಿಯಾನಿ, ಸ್ಟ್ರೀಮ್ ರೈಸ್, ಪಾಲಕ್ ಚಟ್ನಿ ವಿಶೇಷವಾಗಿತ್ತು. ಅದೇರೀತಿ ಸ್ಥಳೀಯ ಅತಿಥಿಗಳಿಗೆ ಉತ್ತರ ಕರ್ನಾಟಕ ಭಾಗದ ಜವಾರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಡಕ್ ರೊಟ್ಟಿ, ಎಣ್ಣ್ಣೆಗಾಯಿ, ಬದನೆಕಾಯಿ ಪಲ್ಯ, ಕೆಂಪು ಚಟ್ನಿ, ಹಿಟ್ಟಿನ ಪಲ್ಯ, ಗೋಧಿಹುಗ್ಗಿ ಊಟ ತಯಾರಿಸಲಾಗಿತ್ತು.