ಮಾಗಡಿ: ತಾಲೂಕಿನ ಭರ್ಗಾವತಿ ಕೆರೆ ತುಂಬಿ ಕೋಡಿ ಹರಿದ ಕಾರಣ ಪರಂಗಿ ಚಿಕ್ಕನಪಾಳ್ಯ ಗ್ರಾಮಸ್ಥರು ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಮುಖಂಡ ರಮೇಶ್ ಮಾತನಾಡಿ, ಪಟ್ಟಣ ವ್ಯಾಪ್ತಿಯ ಒಳಚರಂಡಿ ತ್ಯಾಜ್ಯದ ನೀರು ಭರ್ಗಾವತಿ ಕೆರೆಗೆ ಸೇರಿ ಕೆರೆ ಸಂಪೂರ್ಣ ಕಲುಷಿತವಾಗಿದೆ. ತ್ಯಾಜ್ಯದ ನೀರು ಕೆರೆಗೆ ಬಾರದಂತೆ ಬೇರೆಡೆ ಬಿಡಬೇಕು. ಈ ಹಿಂದೆ ಕೆರೆಯ ನೀರನ್ನು ಕುಡಿಯುತ್ತಿದ್ದೆವು. ಈಗ ಕೆರೆಯ ಒಳಗೆ ಇಳಿಯಲು ಭಯವಾಗುತ್ತಿದೆ. ಗ್ರಾಮದ 60ಕ್ಕೂ ಹೆಚ್ಚು ಮಂದಿಗೆ ಮೂಳೆ ರೋಗ ವ್ಯಾಪಿಸಿ ನಡೆದಾಡಲು ಸಾಧ್ಯವಾಗುತ್ತಿಲ್ಲ. 10 ಮನೆಗಳು ಇರುವ ಗ್ರಾಮಗಳಿಗೆ ಶುದ್ಧ ಕುಡಿಯುವ ಟಕ ಸ್ಥಾಪಿಸಿದ್ದಾರೆ. ಆದರೆ, 250 ಮನೆಗಳಿರುವ ಈ ಗ್ರಾಮಕ್ಕೆ ಕುಡಿಯುವ ನೀರಿನ ಟಕ ನಿರ್ಮಿಸದೆ ಜನ ಪ್ರತಿನಿಧಿಗಳು ರ್ನಿಲಸುತ್ತಿದ್ದಾರೆ ಎಂದು ಆರೋಪಿಸಿದರು. ಹಿರಿಯ ಪತ್ರಕರ್ತ ಟಿ.ಎಂ.ಶ್ರೀನಿವಾಸ್ ಮಾತನಾಡಿ, ನಾಡ ಪ್ರಭು ಕೆಂಪೇಗೌಡರು ನಿರ್ಮಿಸಿರುವ ಭರ್ಗಾವತಿ ಕೆರೆ ಸಂಪೂರ್ಣ ಕಲುಷಿತವಾಗಿದೆ, ಕೆರೆಯಲ್ಲಿ ಜೆಂಡು ಹುಲ್ಲು ಬೆಳೆದು ಕೆರೆ ಕಾಣದ ಪರಿಸ್ಥಿತಿಯಲ್ಲಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.