ಬಸವಕಲ್ಯಾಣ: ಜೀವನದಲ್ಲಿ ಸವಾಲು, ಸಮಸ್ಯೆ, ಸಂಕಷ್ಟಗಳು ಸಹಜ, ಎದೆಲ್ಲದರ ನಡುವೆ ಗುರು ಕರುಣೆಯಿಂದ ಭರವಸೆಯ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠದಲ್ಲಿ ಹಾರಕೂಡ ಗ್ರಾಮದ ಬೆಳಮಗೆ ಪರಿವಾರದಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ೮೫೯ನೇ ತುಲಾಭಾರ ಸೇವೆ ಸಮಾರಂಭದ ಸನ್ನಿಧಾನ ವಹಿಸಿ ಮಾತನಾಡಿದ ಶ್ರೀಗಳು, ಬದುಕಿನಲ್ಲಿ ಬೇವಿನ ಕಹಿ, ಬೆಲ್ಲದ ಸಿಹಿ ಇದ್ದಾಗಲೇ ಯುಗಾದಿಯ ಸಂಭ್ರಮ ಅನುಭವಿಸಲು ಸಾಧ್ಯವಾಗುತ್ತದೆ. ಸದಾ ಸುಖಿಯಾಗಿರಬೇಕು ಎನ್ನುವ ಹಪಾಹಪಿ ಬಿಡಬೇಕು. ಗುರುವಿನ ನಿಷ್ಠ ಭಕ್ತನಾಗಿ, ನೋವು ನಲಿವುಗಳನ್ನು ಮೇಳೈಸಿಕೊಂಡು ನಡೆವಾತ ತೀರವನ್ನು ಸೇರಲು ಯೋಗ್ಯನಾಗುತ್ತಾನೆ ಎಂದರು.
ಚಂದ್ರಿಕಾ ಬೆಳಮಗೆ ಮಾತನಾಡಿದರು. ಜಿಪಂ ನಿವೃತ್ತ ಉಪಕಾರ್ಯದರ್ಶಿ ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ, ಮೇಘರಾಜ ನಾಗರಾಳೆ, ಸುಭಾಷ ಮುರುಡ, ಹೇಮಲತಾ ಹಿರೇಮಠ, ಶ್ರೀದೇವಿ ಹಿರೇಮಠ, ಶಿವಪುತ್ರಪ್ಪ ಅಂಬಲಗಾ, ಸಿದ್ದಲಿಂಗಪ್ಪ ಬೆಳಮಗಿ, ಶಿವಶರಣಪ್ಪ ಬೆಳಮಗೆ ಇತರರಿದ್ದರು.
ಜಯಶ್ರೀ ಪಾಟೀಲ ಸ್ವಾಗತಿಸಿದರು. ಕಾವೇರಿ ಪಾಟೀಲ ವಂದಿಸಿದರು. ನವಲಿಂಗ ಪಾಟೀಲ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನ ಗೀತೆ ಹಾಡಿದರು. ಕುಮಾರಿ ಭಾಗ್ಯಶ್ರೀ ಮತ್ತು ವಿದ್ಯಾಶ್ರೀ ಭರತ ನಾಟ್ಯ ಪ್ರದರ್ಶನ ಮಾಡಿ ಗಮನ ಸೆಳೆದರು.