ಜಿಲ್ಲೆ

ಭರವಸೆ ನೀಡಿದಂತೆ ಕಾಂಗ್ರೆಸ್ ಆಡಳಿತ

ಬಸವಕಲ್ಯಾಣ: ಭರವಸೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನೀಡುತ್ತಿದೆ. ಜನರಿಗೆ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ ಎಂದು ಅರಣ್ಯ, ಪರಿಸರ ಜೀವಶಾಸ್ತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಕಮಿಟಿಯಿಂದ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲೆಯ ನೂತನ ಸಚಿವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ರಾಜ್ಯದ ಅಭಿವೃದ್ಧಿ ಜತೆಗೆ ಜನಪರ ಆಡಳಿತ ನೀಡುವುದೇ ಸರ್ಕಾರದ ಉದ್ದೇಶ ಎಂದರು.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗರಿಗೆ ಮದವೇರಿ ರಾಜ್ಯವನ್ನು ಲೂಟಿ ಹೊಡೆದಿದ್ದರು. ಆದರೆ ಕಾಂಗ್ರೆಸ್ ಜನರಿಗೆ ನೀಡಿದ ಭರವಸೆ ಈಡೇರಿಸುತ್ತಿದೆ. ಶೀಘ್ರದಲ್ಲಿ ತಾಪಂ, ಜಿಪಂ ಚುನಾವಣೆ ಎದುರಾಗಲಿವೆ. ನಂತರ ೨೦೨೪ರಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಬೇಕು. ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.
ಸಚಿವ ರಹೀಮ್ ಖಾನ್, ಎಂಎಲ್‌ಸಿಗಳಾದ ಅರವಿಂದ ಅರಳಿ, ಚಂದ್ರಶೇಖರ ಪಾಟೀಲ್, ಮಾಜಿ ಎಂಎಲ್‌ಸಿ ವಿಜಯ ಸಿಂಗ್ ಮಾತನಾಡಿದರು. ಸಚಿವರಾದ ಈಶ್ವರ ಖಂಡ್ರೆ ಹಾಗೂ ರಹೀಮ್ ಖಾನ್ ಅವರನ್ನು ಬ್ಲಾಕ್ ಕಾಂಗ್ರೆಸ್‌ನಿಂದ ಸತ್ಕರಿಸಲಾಯಿತು. ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ ಸ್ವಾಗತಿಸಿ, ನಿರೂಪಣೆ ಮಾಡಿದರು.
ನಗರ ಘಟಕದ ಅಧ್ಯಕ್ಷ ಮೀರ್ ಅಜರಲಿ ನವರಂಗ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಶರಣಕುಮಾರ ಮೋದಿ, ಶಾಂತಪ್ಪ ಪಾಟೀಲ್, ಬಾಬು ಹೊನ್ನಾನಾಯಕ, ಧನರಾಜ ತಾಳಂಪಳ್ಳಿ, ಶಿವಶರಣರ ಬಿರಾದಾರ, ಶಿವರಾಜ ನರಶೆಟ್ಟೆ, ಪ್ರಕಾಶ ಪಾಟೀಲ, ಶಹಜಹಾನ ತನ್ವೀರ್, ಅರ್ಜುನ ಕನಕ, ರವಿ ಗಾಯಕವಾಡ, ವೈಜನಾಥ ಕಾಮಶೆಟ್ಟಿ, ಲತಾ ಹಾರಕೂಡೆ, ಅಮೃತರಾವ ಚಿಮಕೋಡೆ, ಪಂಡಿತ ಚಿದ್ರಿ, ಸುಧಾಕರ ಗುರ್ಜರ, ಮೀರ್ ಅಮಾನತ್ ಅಲಿ, ಸಿಕಂದರ ಸಿಂಧೆ, ಗೌತಮ ನಾರಾಯಣರಾವ, ರವೀಂದ್ರ ಬೋರಾಳೆ, ಶಿವಕುಮಾರ ಬಿರಾದಾರ, ಪೃಥ್ವಿಗೀರ ಗೋಸ್ವಾಮಿ, ದತ್ತು ಮೂಲಗೆ, ಸಿದ್ದು ಬೋರಗೆ, ಶರಣು ಆಲಗೂಡ ಇತರರಿದ್ದರು.