ಜಿಲ್ಲೆ

ಭರತನಾಟ್ಯದ ವೈಭವ, ಸಂಗೀತ ಸಮ್ಮಿಲನ

ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ವರ್ಣಸಿಂಧು ನೃತ್ಯ ಕಲಾಕೇಂದ್ರದ ಕಲಾವಿದರಾದ ಕಾಳಿಕಾ, ಪ್ರತಿಕ್ಷಾ ಬಿ. ಯಡ್ರಾಮಿ, ಶಬರಿ, ಸಂಜನಾ, ಪ್ರಕೃತಿ, ಸುಪ್ರಿಯಾ, ಸ್ನೇಹಾ, ಸ್ಫೂರ್ತಿ, ಪದ್ಮಿನಿ ಸೇರಿ ಇತರರಿಂದ ಭರತನಾಟ್ಯ ನೋಡುಗರ ಗಮನ ಸೆಳೆಯಿತು.

ನಂತರ ಚಿಕ್ಕಬಳ್ಳಾಪುರದ ರಂಗ ವಿಜಯ ಟ್ರಸ್ಟ್ ನಿಂದ ಪ್ರದರ್ಶಿಸಲಾದ 'ಶಿವಪುರ ಧ್ವಜ ಸತ್ಯಾಗ್ರಹ' ಕುರಿತ ನಾಟಕ ಪ್ರದರ್ಶನ ರಾಷ್ಟ್ರ ಧ್ವಜದ ಮಹತ್ವ ಸಾರುವ ಜತೆಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಬ್ಬಿಸಿತು.

ಶಂಕರ ಹೂಗಾರ ಅವರಿಂದ ಹಿಂದೂಸ್ತಾನಿ ಸಂಗೀತ ಶ್ರೋತೃಗಳನ್ನು ಗಾನಲೋಕಕ್ಕೆ ಕೊಂಡ್ಯೋಯಿತು. ಬಸಯ್ಯ ಗುತ್ತೇದಾರ್ ಅವರಿಂದ ಘಜಲ್, ಗುರುಶಾಂತಯ್ಯ ಹಿರೇಮಠ ಅವರ ಹಾಗೂ ಹಿಂದೂಸ್ತಾನಿ ಸಂಗೀತ ಗಾಯನ ಮನತಣಿಸಿತು.