ಕಾನಹೊಸಹಳ್ಳಿ: ಸಾರ್ವಜನಿಕರ ಹಿತ ಮತ್ತು ದೇಶದ ರಕ್ಷಣೆಗಾಗಿ ಗಡಿಯಲ್ಲಿ ಕಾರ್ಯನಿರ್ವಹಿಸುವ ಯೋಧರು ಹಾಗೂ ಅವರ ಕುಟುಂಬದವರು ಕ್ಷೇಮವಾಗಿರಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಚಿಕ್ಕಜೋಗಿಹಳ್ಳಿ ತಾಂಡಾ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸಮೀಪದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಕಾನಹೊಸಹಳ್ಳಿಯ ಯುವ ಬ್ರಿಗೇಡ್‌ನಿಂದ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಭಯೋತ್ಪಾದಕತೆಯನ್ನು ನಿರ್ಮೂಲನೆ ಮಾಡಲು ಹಾಗೂ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಆಪರೇಷನ್ ಸಿಂಧೂರ ಮೂಲಕ ಕೇಂದ್ರ ಸರ್ಕಾರ ದೃಢ ನಿರ್ಧಾರ ಮಾಡಿರುವುದು ಉತ್ತಮ ಬೆಳವಣಿಗೆ. ಭಾರತೀಯ ಸೇನೆ ಉಗ್ರವಾದ ಮತ್ತು ಉಗ್ರರ ವಿರುದ್ಧ ಕಠಿಣ ನಿಲವು ಕೈಗೊಂಡಿದ್ದು, ಭಾರತೀಯರು ಸೇನೆಯನ್ನು ಬೆಂಬಲಿಸಬೇಕೆಂದರು.
ಬಿಜೆಪಿ ಮಂಡಲ ಅಧ್ಯಕ್ಷ ಬಣವಿಕಲ್ಲು ನಾಗರಾಜ್, ಪ್ರಮುಖರಾದ ಸಣ್ಣಬಾಲಪ್ಪ, ಎಳನೀರು ಗಂಗಣ್ಣ, ಸೂರ್ಯಪ್ರಕಾಶ್, ದಯಾನಂದ್ ಸಜ್ಜನ್, ಕೆಂಚಮನಹಳ್ಳಿ ಬಸವರಾಜ್, ಹುಲಿಕೆರೆ ಗೀತಾ, ಸುದರ್ಶನ ತಳವಾರ, ವಕೀಲ ಹನುಮಂತಪ್ಪ, ಶಾಂತನಹಳ್ಳಿ ಭದ್ರಪ್ಪ, ಕೆ.ಎಸ್.ವಿಶ್ವನಾಥ್, ತಿಪ್ಪೇಶ್, ಸಂಜಯ್ ಕುಮಾರ್, ರಾಕೇಶ್ ಇತರರಿದ್ದರು.