ಕಲಬುರಗಿ: ಜಮ್ಮು ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮನಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವುದು ಹೇಯ ಕೃತ್ಯವಾಗಿದೆ. ಪ್ರವಾಸಿಗರ ರ‍್ಮವನ್ನು ಕೇಳಿ ಹತ್ಯೆ ಮಾಡಿರುವುದು ಇಡೀ ದೇಶಕ್ಕೆ ಆಘಾತ ತರಿಸಿದ್ದು, ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಹೇಳಿದರು.
ಪಹಲ್ಗಾಮನಲ್ಲಿ ಭಯೋತ್ಪಾದಕರ ದಾಳಿ ಖಂಡಿಸಿ, ದಾಳಿಯಲ್ಲಿ ಮೃತರಾದ ೨೮ ಜನರಿಗೆ ಶ್ರದ್ಧಾಂಜಲಿ ಸಲ್ಲಿಸಲು ಭಾರತೀಯ ಜನತಾ ಪದಿಂದ ಬುಧವಾರ ಸಂಜೆ ರ‍್ಪಡಿಸಿದ್ದ ಶ್ರದ್ಧಾಂಜಲಿ ಕ್ಯಾಂಡಲ್ ಮರ್ಚ್ನಲ್ಲಿ ಪಾಲ್ಗೊಂಡು ಮಾತನಾಡಿ, ರ‍್ಮದ ಹೆಸರಿನಲ್ಲಿ ೨೮ ಜನರನ್ನು ಕೊಲೆ ಮಾಡಿರುವುದು ಘೋರ ಕೃತ್ಯ ಎಂದು ಖಂಡಿಸಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಸಾಮಾನ್ಯ ಜನರನ್ನು ಹತ್ಯೆ ಮಾಡಿರುವುದು ಖಂಡನೀಯ. ಹಿಂದೆ ಪುಲ್ವಾಮಾ ದಾಳಿ ನಡೆದಾಗ ರ‍್ಜಿಕಲ್ ಸ್ಟ್ರೆ$ಕ್ ಮಾಡಿ, ಹೊಡೆದುರುಳಿಸಲಾಗಿತ್ತು. ಅದೇ ಮಾದರಿ ಪ್ರಸ್ತುತ ಪಾಕಿಸ್ತಾನ ಮತ್ತು ಭಯೋತ್ಪಾದಕರಿಗೆ ತಕ್ಕ ಉತ್ತರ ಕೊಡುವ ಕಾಲ ಬಂದಿದೆ ಎಂದು ಹೇಳಿದರು.
ಮಾಜಿ ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಪಾಕಿಸ್ತಾನ ಸೇನೆಯ ಮುಖ್ಯಸ್ಥ ಇತ್ತೀಚೆಗೆ ಭಾರತದ ವಿರುದ್ಧ ಪ್ರಚೋಧನಕಾರಿ ಹೇಳಿಕೆ ನೀಡಿದ್ದ. ಅದರ ದುಷ್ಪರಿಣಾಮ ಇಂದು ಕಾಣುತ್ತಿದ್ದು, ಅವರಿಗೆ ತಕ್ಕ ಪಾಠ ಕಲಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವಿನಿಂದ ಕಾಶ್ಮೀರದಲ್ಲಿ ಆತಂಕವಾಗಿ ಕೃತ್ಯಗಳು ಣಿಸಿದ್ದು, ಇದೀಗ ಮರುಕಳಿಸಿದ್ದು, ರ‍್ಮ ಕೇಳಿದ ಉಗ್ರರನ್ನು ಹೊಡೆದುರುಳಿಸಿ, ಆತಂಕವಾದ ಹರಡದಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ರ‍್ದಾರ್ ವಲ್ಲಭಬಾಯಿ ಪಟೇಲ್ ವೃತ್ತದವರೆಗೆ ನೂರಾರು ಜನರಿಂದ ಕ್ಯಾಂಡಲ್ ಮರ‍್ಚ್ ನಡೆಸಲಾಯಿತು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯ ಅಶೋಕ ಬಗಲಿ, ಪ್ರಮುಖರಾದ ನಿತಿನ್ ಗುತ್ತೇದಾರ್, ಅವ್ವಣ್ಣ ಮ್ಯಾಕೇರಿ, ಶಿವಯೋಗಿ ನಾಗನಹಳ್ಳಿ, ಶರಣಪ್ಪ ತಳವಾರ, ಮಲ್ಲು ಉದನೂರ, ಮಹಾದೇವ ಬೆಳಮಗಿ, ಉಮೇಶ ಪಾಟೀಲ್, ಶ್ರೀನಿವಾಸ ದೇಸಾಯಿ, ಡಾ.ಸುಧಾ ಹಾಲಕಾಯಿ, ಸಂತೋಷ ಹಾದಿಮನಿ, ಶಿವಾ ಅಷ್ಟಗಿ, ವಿಜಯಲ$್ಮ ಗೊಬ್ಬುರ, ಚನ್ನಪ್ಪ ಡಿಗ್ಗಾವಿ, ಆನಂದ ಲೇಂಗಟಿ, ನಂಜುಂಡ ಯಳಸಂಗಿ, ಶಂಭುಲಿಂಗ ಬಳಮಟ್ಟಿ, ನಾಗರಾಜ ಮಹಾಗಾಂವಕರ್, ದೇವಿಂದ್ರ ದೇಸಾಯಿ ಕಲ್ಲೂರ, ಶಾಂತಪ್ಪ ಪಟ್ಟಣ, ಸಚಿನ ಕಡಗಂಚಿ, ಶ್ರೀಶೈಲ ನಾಟಿಕಾರ, ರಾಜು ನಾಗನಹಳ್ಳಿ, ಆನಂದ ಪಾಟೀಲ್, ಲಿಂಗರಾಜ ಬಿರಾದಾರ, ಸಪ್ನಾ ಮಂಗಲಗಿ, ಈರಣ್ಣ ಹೊನ್ನಳ್ಳಿ, ಮಹೇಶ ಚವ್ಹಾಣ್, ಮಲ್ಲು ಜಿನಕೇರಿ ಇತರರಿದ್ದರು.