ಕೊಲೆ ಪ್ರಕರಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಜಿಪಿ ವಿಕಾಸಕುಮಾರ್ ವಿಕಾಸ್. ಎಸ್ಪಿ ಅಮರನಾಥ ರೆಡ್ಡಿ, ಎಎಸ್ಪಿ ಪ್ರಸನ್ನ ದೇಸಾಯಿ ಹಾಗೂ ಮಹಾಂತೇಶ್ ಜಿದ್ದಿ ಇದ್ದರು.  
ಜಿಲ್ಲೆ

ಭಯಾನಕ ಕೃತ್ಯಕ್ಕೆ ಕುಮ್ಮಕ್ಕು ಮಾಟ ಮಂತ್ರದ ಭಯ !

ಬಾಗಲಕೋಟೆ: ಹೆಣ್ಣು ಮಕ್ಕಳಿಗೆ ಆಸ್ತಿ ಪಾಲು ಕೇಳಬಹುದು ಎನ್ನುವ ಅನುಮಾನ, ಮೂಢನಂಬಿಕೆಗೆ ಮೊರೆಹೋಗಿ ಮೌಢ್ಯತೆಯ ಪರಮಾವಽ ಪ್ರದರ್ಶನ ಹಾಗೂ ಅನೈತಿಕ ಸಂಬಂಧದ ಬಗ್ಗೆ ಕಲ್ಪನೆಯಲ್ಲಿ ಮಿಂದೆದ್ದ ಪರಿಣಾಮ ಶೆಡ್ ಗೆ ಬೆಂಕಿ ಹಚ್ಚಿ ತಾಯಿ-ಮಗಳು ಸಾವನ್ನಪ್ಪಿದ್ದ ಘಟನೆಯ ಹಿಂದಿರುವ ಕಾರಣ.
ಹೌದು, ಇತ್ತೀಚಿಗೆ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ತೋಟದ ಶೆಡ್ ನಲ್ಲಿ ನಡೆದಿದ್ದ ಸಜೀವ ದಹನದ ದುಷ್ಕೃತ್ಯ ಇಡೀ ರಾಜ್ಯವನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಮಾನವೀಯತೆ ಮರೆತು ಈ ಹೀನ ಕೃತ್ಯ ಎಸೆಗಲು ಕಾರಣ ಏನಿರಬಹುದು ಎಂದು ಬಾಗಲಕೋಟೆ ಪೊಲೀಸರು ತನಿಖೆ ಕೈಗೊಂಡಾಗ ಬೆಳಕಿಗೆ ಬಂದಿರುವುದು ಬರೀ ಅನುಮಾನ, ಆತಂಕ, ಶಂಕೆ ಎನ್ನುವುದು.

ಬೆಳಗಲಿ ಗ್ರಾಮದ ತೋಟದ ಶೆಡ್ ಗೆ ಬೆಂಕಿ ಹಚ್ಚಿ ತಾಯಿ-ಮಗಳು ಹಾಗೂ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಯುವಕ ಸೇರಿ ಒಟ್ಟು ಮೂವರು ಸಾವನ್ನಪ್ಪಿದ್ದರು. ಇದು ಅತ್ಯಂತ ವ್ಯವಸ್ಥಿತಿವಾಗಿ ನಡೆದಿದ್ದ ಕೊಲೆ ಪ್ರಕರಣ. ಇಲ್ಲಿ ಇಡೀ ಕುಟುಂಬವನ್ನೇ ಸರ್ವನಾಶ ಮಾಡುವ ಉದ್ದೇಶದಿಂದ ದುಷ್ಕರ್ಮಿಗಳು ಈ ಕೃತ್ಯ ಎಸೆಗಿದ್ದರು ಎನ್ನುವುದನ್ನು ಪೊಲೀಸರು ಬೇಽಸಿದ್ದಾರೆ.

ಮೂವರು ಅಂದರ್ :
ಪ್ರಕರಣಕ್ಕೆ ಸಂಬಂಽಸಿದಂತೆ ಅಮೀನಸಾಬ ಸಿರಾಜುಸಾಬ್ ಪೆಂಡಾರಿ, ಬಾಬುಲಾಲ ಸಿ.ಪೆಂಡಾರಿ ಹಾಗೂ ಜಾಕೀರಹುಸೇನ ಮೈಬೂಸಾಬ್ ನದಾ-ï ಎನ್ನುವವರನ್ನು ಮುಧೋಳ ಪೊಲೀಸರು ಬಂಽಸಿದ್ದಾರೆ. ಅಮೀನಸಾಬ ಹಾಗೂ ಬಾಬುಲಾಲ್ ಇಬ್ಬರು ಸಹೋದರರು ಇದ್ದು, ಬೆಳಗಲಿ ಗ್ರಾಮದಲ್ಲಿ ಶ್ರೀಮಂತ ಕುಟುಂಬಗಳಲ್ಲಿ ಇವರದ್ದು ಒಂದು. ಇನ್ನು ಜಾಕೀರಹುಸೇನ ಎನ್ನುವ ಆರೋಪಿಯೇ ಸಹೋದರರಲ್ಲಿ ಕಿಚ್ಚು ಪ್ರಜ್ವಲಿಸುವಂತೆ ಮಾಡಿ ಇಡೀ ಕುಟುಂಬವನ್ನು ಸರ್ವನಾಶ ಮಾಡಲು ಮುಂದಾಗುವುದಕ್ಕೆ ಕಾರಣವಾಗಿರುವ ಮೌಢ್ಯಬಿತ್ತನೆಕಾರ.

ಬ್ರಹ್ಮರಾಕ್ಷಸನ ಮತ್ತು ಕುಟುಂಬ ನಾಶ :
ಶೆಡ್ ಗೆ ಬೆಂಕಿ ಹಚ್ಚಿದ್ದ ಘಟನೆ ಹಿಂದೆ ಥ್ರಿಲ್ಲರ್ ಕಥೆ ಇರುವ ಸಿನಿಮಾ ಸ್ಟೋರಿ ಮಾಡಬಹುದು. ಹೌದು, ಕೊಲೆ ಆರೋಪಿಗಳ ತಂದೆ ಸಿರಾಜುಸಾಬ್ ಅವರ ಇಬ್ಬರು ತಂಗಿಯರ ಪೈಕಿ ಪಾತೀಮಾ ಅವರ ಮಗಳು ಜೈಬಾನು ಶೆಡ್ ನಲ್ಲಿ ಸಜೀವ ಆಗಿರುವ ಮಹಿಳೆ. ಜೈಬಾನು ವನ್ನು ಮದುವೆ ಆಗಿದ್ದು ದಸ್ತಗೀರಸಾಬ್ ಪೆಂಡಾರಿ. ಸಿರಾಜು ಅವರು ಇನ್ನೊಬ್ಬ ಸಹೋದರಿ ಸದಲಮಾ ಅವರಿಗೆ ೪ ಎಕರೆ ಜಮೀನು ಕೊಟ್ಟಿದ್ದರು. ಅವರಂತೆ ನನ್ನ ಪತ್ನಿ ತಾಯಿಗೂ ಜಮೀನು ಕೊಟ್ಟಿದ್ದರೆ ಈಗ ಅದರ ಮಾಲೀಕ ನಾನು ಇರುತ್ತಿದ್ದೆ ಎಂದು ದಸ್ತಗೀರಸಾಬ್ ಎಂದಿದ್ದನಂತೆ. ಪಿತ್ರಾರ್ಜಿತ ಆಸ್ತಿ ಜೊತೆ ಸ್ವಂತ ದುಡಿಮೆಯಲ್ಲಿ ೨೫ ಎಕರೆ ಜಮೀನು ಹೊಂದಿದ್ದ ಸಿರಾಜಸಾಬ ಅವರ ಪುತ್ರರಾದ ಅಮೀನಸಾಬ ಮತ್ತು ಬಾಬುಲಾಲ್ ಅವರಿಗೆ ದಸ್ತಗೀರಸಾಬ್ ಬಗ್ಗೆ ಅಪನಂಬಿಕೆ ಶುರುವಾಗಿತ್ತು. ಇದೇ ವೇಳೆ ದಸ್ತಗೀರಸಾಬ್ ಮನೆಯಲ್ಲಿ ಮಾಟ ಮಂತ್ರ ಮಾಡುತ್ತಿದ್ದಾರೆ. ತಮ್ಮ ಕುಟುಂಬ ದಿವಾಳಿ ಮಾಡಲು ಮಾಟ ಮಂತ್ರ ಮಾಡಿಸುತ್ತಿದ್ದಾರೆ. ಇದರಿಂದ ತಮ್ಮ ಮನೆಯಲ್ಲಿ ಸಾವು ನೋವು ಸಂಭವಿಸುತ್ತವೆ ಎನ್ನುವ ಮತ್ತೊಂದು ಅನುಮಾನ ಶುರುವಾಗಿತ್ತು.

ಇದೇ ವೇಳೆ ಕೆಲ ತಿಂಗಳ ಹಿಂದೆ ಅಮೀನಸಾಬ್ ಅವರ ಮನೆ ಮುಂದೆ ಮಾಟ ಮಂತ್ರದ ವಸ್ತುಗಳು ಬಿದ್ದಿದ್ದವು. ಅದಾದ ಕೆಲವೇ ದಿನಗಳಲ್ಲಿ ಅಮೀನಸಾಬ್ ಅವರ ತಾಯಿ ಸಾವನ್ನಪ್ಪಿದ್ದರು. ಈ ಬಗ್ಗೆ ಅಮೀನಸಾಬ್ ಅವರು ತಮ್ಮ ಸಮುದಾಯದ ಜಾಕೀರಹುಸೇನ್ ಎನ್ನುವವರನ್ನು ಸಂಪರ್ಕಿಸಿದಾಗ ಆತ ಹೇಳಿದ್ದ ಆ ಮೌಢ್ಯ ಇವರನ್ನು ಇನ್ನಿಲ್ಲದಂತೆ ಕಾಡಿತ್ತು. ಶತಾಯಗತಾಯ ಕೊಲೆ ಮಾಡಲೇಬೇಕೆಂದು ನಿರ್ಧರಿಸಿದ್ದರು.

ದಸ್ತಿಗೀರಸಾಬ್ ಮನೆಯಲ್ಲಿ ಗೊಂಬೆ ಮತ್ತು ಪಿಶಾಚಿಗಳು ಇದ್ದು, ಅವು ಬಂದು ತಮ್ಮ ಮನೆ ಸರ್ವನಾಶ ಮಾಡಲು ಮುಂದಾಗಿವೆ. ಇದರ ಜೊತೆಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಸುಬಾನ್, ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನುವ ಶಂಕೆಯಲ್ಲಿ ಅಮೀನಸಾಬ್ ಇದ್ದ. ಇದಕ್ಕೆಲ್ಲ ಪರಿಹಾರ ಏನು ಎಂದು ಮಾರಾಪುರದಲ್ಲಿ ಇದ್ದ ಜಾಕೀರಹುಸೇನ್ ನದಾ-ï ಎನ್ನುವವರಿಗೆ ಕೇಳಿದಾಗ, ದಸ್ತಗೀರಸಾಬ್ ಮನೆಯಲ್ಲಿ ಇರುವ ಗೊಂಬೆ ಹಾಗೂ ಬ್ರಹ್ಮರಾಕ್ಷಸನ ಉದ್ಭವಿಸುವ ಮತ್ತೊಂದು ಗೊಂಬೆ ಇದೆ. ಇವು ಮನೆಯ ಗೋಡೆಯಲ್ಲಿವೆ. ಗೊಂಬೆಗಳ ಜೊತೆ ಆ ಕುಟುಂಬದವರನ್ನೆಲ್ಲ ಒಮ್ಮೆಲೆ ಸುಟ್ಟು ಹಾಕಿದರೆ ನಿಮ್ಮ ಸಂಕಷ್ಟಕ್ಕೆ ಪರಿಹಾರ ಎಂದು ಮೌಢ್ಯತೆ ಬಿತ್ತಿದ್ದ.

ಪ್ಲಾನ್ ಮಾಡಿ ಶೆಡ್ ಗೆ ಬೆಂಕಿ:
ಜಾಕೀರಹುಸೇನ್ ಬಿತ್ತಿದ್ದ ಮೌಢ್ಯ ಮತ್ತೊಂದೆಡೆ ಇದೇ ವೇಳೆ ಕೊಲ್ಲಾಪುರದಿಂದ ಸಿದ್ದಕಿ ಎನ್ನುವ ಹುಡುಗ ದಸ್ತಗೀರಸಾಬ್ ಮನೆಗೆ ಬಂದಿದ್ದ. ಅಲ್ಲಿಂದ ಮಾಟ ಮಾಡಿಸಿಕೊಂಡು ಬಂದಿದ್ದಾನೆ ಎಂದು ಭಾವಿಸಿದ ಅಮೀನಸಾಬ್ ಸಹೋದರರು, ಪಕ್ಕಾ ಪ್ಲಾನ್ ಮಾಡಿ ಶೆಡ್ ಗೆ ಬೆಂಕಿ ಹಚ್ಚಲು ನಿರ್ಧರಿಸಿದ್ದರು. ಇದಕ್ಕೆ ಅಗತ್ಯ ಇದ್ದ ಪೆಟ್ರೋಲ್, ಪೈಪ್, ಮೋಟಾರ್, ವೈಯರ್ ಎಲ್ಲವನ್ನು ಒಂದು ತಿಂಗಳಲ್ಲಿ ಖರೀದಿಸಿ ತಮ್ಮ ಹೊಲದಲ್ಲಿ ಬಚ್ಚಿಟ್ಟು ಜುಲೈ ೧೫ ರಂದು ರಾತ್ರಿ ಶೆಡ್ ಹೊರಗಿನಿಂದ ಲಾಕ್ ಮಾಡಿ, ತಡರಾತ್ರಿ ಬೆಂಕಿ ಹಚ್ಚಿದ್ದರು.

ಯಾರಲೇ ನೀವು ಅಂದಿದ್ದ ದಸ್ತಗೀರಸಾಬ್:
ಶೆಡ್ ಬೆಂಕಿ ಹಚ್ಚುವ ಮುನ್ನ ಸಿಂಟೆಕ್ಸ್ ನಿಂದ ಪೈಪ್ ಮೂಲಕ ಶೆಡ್ ಒಳಗಡೆ ಪೆಟ್ರೋಲ್ ಬಿಡುತ್ತಿದ್ದಾಗ ದಸ್ತಗೀರಸಾಬ್ ಗೆ ಎಚ್ಚರವಾಗಿ ಯಾರಲೇ ಅಂವಾ ಪೆಟ್ರೋಲ್ ಹಾಕುತ್ತಿರುವುದು ಎಂದು ಕೂಗಿದ್ದ. ತಕ್ಷಣವೇ ಅಮೀನಸಾಬ್ ಶೆಡ್ ಗೆ ಬೆಂಕಿ ಕಡ್ಡಿ ಗೀಜಿ ಬಿಟ್ಟಿದ್ದ. ಇದರಿಂದ ತಾಯಿ-ಮಗಳು ಸ್ಥಳದಲ್ಲೆ ಸಾವನ್ನಪ್ಪಿದ್ದರೆ, ಸುಬಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಇಡೀ ಪ್ರಕರಣ ಬೇಽಸುವಲ್ಲಿ ಶಶಬಾಗಲಕೋಟೆ ಮುಧೋಳ ಪೊಲೀಸರು ಯಶಸ್ವಿಯಾಗಿದ್ದಾರೆ. ಎಸ್ಪಿ ಅಮರನಾಥ ರೆಡ್ಡಿ, ಎಎಸ್ಪಿ ಗಳಾದ ಪ್ರಸನ್ನ ದೇಸಾಯಿ ಹಾಗೂ ಮಹಾಂತೇಶ್ ಜಿದ್ದಿ ಮಾರ್ಗದರ್ಶನದಲ್ಲಿ ಜಮಖಂಡಿ ಡಿಎಸ್‌ಪಿ ಶಾಂತವೀರ, ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‌ಐ ಅಜೀತ್ ಹೊಸಮನಿ ಪ್ರಕರಣ ಬೇಽಸಿ, ಆರೋಪಿಗಳನ್ನು ಬಂಽಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾ ತಂಡದ ಎಲ್ಲ ಅಽಕಾರಿಗಳು ಹಾಗೂ ಸದಸ್ಯರಿಗೆ ಬಹುಮಾನ ಘೋಷಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೆಳವಾಗಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ್ ವಿಕಾಸ್ ಅವರು ತಿಳಿಸಿದರು.