ಭದ್ರಾವತಿ: ಕೋಟಿ ಕಂಠ ಗಾಯನ ಕಾರ್ಯಕ್ರಮ ನಗರದಲ್ಲಿಯೂ ಯಶಸ್ವಿಯಾಯಿತು.
ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆಯ ಅಧಿಕಾರಿ, ಸಿಬ್ಬಂದಿ, ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಗೀತೆಗಳನ್ನು ಹಾಡಿದರು. 500ಕ್ಕೂ ಹೆಚ್ಚು ಜನರು ಸಮೂಹ ಗಾಯನದಲ್ಲಿ ಪಾಲ್ಗೊಂಡಿದ್ದರು. ವಿಕ್ರಂ ಮೆಲೋಡಿಸ್ ಲೋಕನಾಥ್, ಅಪೇಕ್ಷ ಮಂಜುನಾಥ್ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನ್ಯೂಟೌನ್ ಬಾಲಕಿಯರ ಕಾಲೇಜು, ಹೊಸಮನೆ ಎನ್.ಎಂ.ಸಿ. ಶಾಲೆ, ವಿಇಎಸ್ ಸೇರಿದಂತೆ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಲ್ಲಿಯೂ ಗಾಯನ ಕಾರ್ಯಕ್ರಮ ನಡೆಯಿತು.