ಚಿತ್ರದುರ್ಗ: ಭದ್ರಾಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿರುವ 5300 ಕೋಟಿ ರೂ.ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂ ದ್ರಕ್ಕೆ ಮತ್ತೆ ಪತ್ರಬರೆದಿರುವುದಾಗಿ ಭದ್ರಾಮೇಲ್ದಂಡೆ ಯೋಜನೆ ಮುಖ್ಯಇಂಜಿನಿಯರ್ ಫಕೀರಪ್ಪ ಹರಿಶ್ಚಂದ್ರಲಮಾಣಿ ಹೇಳಿದರು.
ಯೋಜನೆ ಮುಖ್ಯಇಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡಿರುವ ಅವರನ್ನು ಶುಕ್ರವಾರ,ಜಿಲ್ಲಾ ನೀರಾವರಿ ಅನುಷ್ಠಾನ ಹೋರಾ ಸಮಿತಿ ಪದಾಧಿಕಾರಿಗಳಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು,ವಿಶ್ವೇಶ್ವರಯ್ಯ ನೀರಾವರಿ ನಿಗಮದ ಮೂಲಕ ಪ್ರಧಾನಿ ನರೇಂದ್ರ ಮೋದಿ,ಹಣಕಾಸು ಸಚಿವೆ ನಿರ್ಮಲಾಸೀತರಾಮನ್ ಅವರಿಗೆ ಅನುದಾನ ಬಿಡುಗಡೆಗೆ ಕೋರಿ ಪತ್ರ ಬರೆಯಲಾಗಿದೆ.
ಸಂಸದ ಗೋವಿಂದಕಾರಜೋಳ ಅವರು ಕೂಡ ಪ್ರತ್ಯೇಕ ಪತ್ರ ಬರೆದು ಕೇಂದ್ರದ ಮೇಲೆ ಒತ್ತಡ ತರಲಿದ್ದಾರೆ. ಪ್ರಧಾನಮಂತ್ರಿ ಕಿಸಾ ನ್ ಸಿಂಚಾಯಿ ಯೋಜನೆ ಅಥವಾ ಎಐಬಿಪಿಯಡಿ ಅನುದಾನ ಒದಗಿಸುವಂತೆ ವಿನಂತಿ ಮಾಡಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಮಧ್ಯಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಈ ಏತ ನೀರಾವರಿ ಯೋಜನೆಗೆ ತುಂಗಾದಿಂದ ಭದ್ರಾಕ್ಕೆ ಮೊದಲ ಹಂತದಲ್ಲಿ 17.40 ಟಿಎಂಸಿ,ಭದ್ರಾದಿಂದ 2ನೇ ಹಂತದಲ್ಲಿ 29.90 ಟಿಎಂಸಿ ನೀರನ್ನು ಎತ್ತಿ ಸೂಕ್ಷ್ಮ ನೀರಾ ವರಿ ಮೂಲಕ,ಚಿಕ್ಕಮಗಳೂರು,ತುಮಕೂರು,ದಾವಣಗೆರೆ,ಚಿತ್ರದುರ್ಗ ಜಿಲ್ಲೆಗಳ 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ಹಾಗೂ 367ಕೆರೆಗಳನ್ನು ತುಂಬಿಸುವ ಮೂಲಕ ಕುಡಿವ ನೀರನ್ನು ಒದಗಿಸಲಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ ಎಂದರು.
‘ಭದ್ರೆ’ಯನು ್ನರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಿ ಕೇಂದ್ರ ಸಂಪುಟದ ಮುಂದೆ ಮಂಡಿಸಲಾಗಿದೆ. 2020 ಡಿಸೆಂಬರ್16ರಲ್ಲಿ 21,473 ಕೋಟಿ ರೂ.ವೆಚ್ಚದ ಪರಿಷ್ಕೃತ ಯೋಜನೆಗೆ ಆಡಳಿತಾತ್ಮಕ ಅನುಮೋದ ನೆ ದೊರೆತಿದ್ದು,ಯೋಜನೆ ತಾಂತ್ರಿಕ-ಆರ್ಥಿಕ ಕಾರ‌್ಯ ಸಾಧ್ಯತೆ ಅಂಗೀಕರಿಸಲಾಗಿದೆ.
ಜಲಶಕ್ತಿ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ,‘ಭದ್ರೆ’ರಾಷ್ಟ್ರೀಯ ಯೋಜನೆಗೆ ಸೇರಲು ಅರ್ಹವಿದೆ. ಹೈಪವರ್ ಸ್ಟೀರಿಂಗ್‌ಕ ಮಿಟಿ ಸಭೆ ಮುಂದೆಯೂ ಈ ಪ್ರಸ್ತಾವನೆ ಇದೆ. ಕೇಂದ್ರ ಹಣಕಾಸು ಕಾರ್ರ‌್ಯದರ್ಶಿನಡೆಸಿರುವ ಸಾರ್ವಜನಿಕ ಹೂಡಿಕೆ ಮಂಡಳಿ ಸಭೆಯ ಲ್ಲೂ ಶಿಫಾರಸು ಮಾಡಲಾಗಿದೆ ಎಂಬುದನ್ನು ಪತ್ರದಲ್ಲಿ ನೆನಪಿಸಲಾಗಿದೆ.
ಕೇಂದ್ರದ ಕಳೆದ ಬಜೆಟ್‌ನಲ್ಲಿ ಯೋಜನೆಗೆ 5300 ಕೋಟಿ ರೂ.ಘೋಷಿಸಿದ್ದರೂ ಅನುದಾನ ಬಿಡುಗಡೆಯಾಗಿಲ್ಲ. ಕಾಮಗಾರಿ ತ್ವರಿತ ಗತಿ ಪೂರ್ಣಗೊಳಿಸಿ,ರೈತರ ಹಿತ ಕಾಪಾಡಲು ಕೇಂದ್ರದ ನೆರವು ಅಗತ್ಯವಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ವೇಗವರ್ಧಿ ತ ನೀರಾವರಿ ಪ್ರಯೋಜನ ಕಾರ್ಯಕ್ರಮ(ಪಿಎಂಕೆಎಸ್‌ವೈ-ಎಐಬಿಬಿ)ದಡಿ ‘ಭದ್ರೆ’ಗೆ 5300 ಕೋಟಿ ರು ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದು ಲಮಾಣಿ ಅವರು ತಿಳಿಸಿದರು.
ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ,ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾ ನಂದ್,ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ,ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ,ಪ್ರೊ.ಜೆ.ಯಾದವರೆಡ್ಡಿ ಇದ್ದರು.
(ಸಿಟಿಡಿ 21 ನ್ಯೂಸ್ ಭದ್ರಾ)
ಭದ್ರಾ ಮೇಲ್ದಂಡೆ ಯೋಜನೆ ಮುಖ್ಯಇಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡಿರುವ ಎಫ್.ಎಚ್.ಲಮಾಣಿ ಅವರನ್ನು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ಚಿತ್ರದುರ್ಗದಲ್ಲಿ ಶುಕ್ರವಾರ ಗೌರವಿಸಲಾಯಿತು. ಬಿ.ಎ.ಲಿಂಗಾರೆಡ್ಡಿ,ಕೆ.ಆರ್.ದಯಾ ನಂದ್,ಚಿಕ್ಕಪ್ಪನಹಳ್ಳಿ ಷಣ್ಮುಖ,ಮಲ್ಲಾಪುರ ತಿಪ್ಪೇಸ್ವಾಮಿ,ಪ್ರೊ.ಜೆ.ಯಾದವರೆಡ್ಡಿ ಇದ್ದರು.