ಜಿಲ್ಲೆ

ಭದ್ರಾ ವೇಗಕ್ಕೆ ಬೇಕಿದೆ ಆರ್ಥಿಕ ಬಲ

ಚಿತ್ರದುರ್ಗ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ, ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ಅನುದಾನ ಮೀಸಲಿಡದ ಕಾರಣ ವೇಗ ಪಡೆದು ಮುಂದೆ ಸಾಗುವ ಲಕ್ಷಣಗಳು ಈ ಬಾರಿಯೂ ಕಾಣದಂತಾಗಿದೆ. ಅನುದಾನ ಮೀಸಲಿಡುವ ನಿರೀಕ್ಷೆ ರಾಜ್ಯ ಬಜೆಟ್ ಹುಸಿಗೊಳಿಸಿದೆ.

ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿ ಮೀನುಗಾರಿಕೆ ಕೈಗೊಳ್ಳಲು 6 ಕೋಟಿ ರೂ., ಕ್ಯಾನ್ಸರ್ ರೋಗಿಗಳಿಗಾಗಿ ಜಿಲ್ಲಾ ಕೇಂದ್ರದಲ್ಲಿ ಡೇ-ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪನೆಗೆ 20 ಕೋಟಿ ರೂ., ಕೌಶಲಾಭಿವೃದ್ಧಿಗಾಗಿ ಜಿಟಿಟಿಸಿ ಕೇಂದ್ರ ಹೊರತುಪಡಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಪ್ರಸ್ತಾಪಿಸದೆ ಇರುವುದು ಜಿಲ್ಲೆಯ ಹಲವರಲ್ಲಿ ಅಸಮಾಧಾನ ಮೂಡಿಸಿದೆ. ಬಜೆಟ್ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.