ಚಿತ್ರದುರ್ಗ: ಬರಪೀಡಿತ ಚಿತ್ರದುರ್ಗ ಜಿಲ್ಲೆ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಕಳೆದ ನವೆಂಬರ್ ಅಂತ್ಯಕ್ಕೆ 10,115 ಕೋ ಟಿ ರೂ.ವೆಚ್ಚ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದನದಲ್ಲಿ ಮಂಗಳವಾರ ತಿಳಿಸಿದ್ದಾರೆ. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪ್ರಶ್ನೆಗೆ ಉತ್ತರಿಸಿರುವ ಡಿಸಿಎಂ,ಯೋಜನೆ ಪುನರ್ ಪರಿಷ್ಕೃತ ವೆಚ್ಚ 21473 ಕೋಟಿ ರೂ.ಗಳೆಂದು ಅಂದಾಜಿಸಿದ್ದು, ಅ ನುದಾನ ಲಭ್ಯತೆಗೆ ಅನುಗುಣವಾಗಿ ಮಾರ್ಚ್ 2028ಕ್ಕೆ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸಂಪುಟದ ಅನುಮೋದನೆಗೆ ಶಿಫಾರಸಾಗಿದೆ ಹಾಗೂ ಇ ದಕ್ಕಾಗಿ ಕಳೆದ ಸಾಲಿನ ಬಜೆಟ್‌ನಲ್ಲಿ ಪಿಎಂಕೆಎಸ್‌ವೈ-ಎಐಬಿಪಿಯಡಿ ಕೇಂದ್ರ ಮಂಜೂರು ಮಾಡಿರುವ 5300 ಕೋಟಿ ರೂ.ಅನುದಾನ ನಿರೀಕ್ಷಿಸಲಾಗಿದೆ. ಯೋಜನೆಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಚುರುಕಿಗೆ ಕ್ರಮವಹಿಸಲಾಗಿದೆ.
ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 23888 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮನೀರಾವರಿ ಸೌಲಭ್ಯ ಒದಗಿಸು ವ ಚಿತ್ರದುರ್ಗ ಶಾಖಾ ಕಾಲುವೆಯ ಬ್ಲಾಕ್ 9 ಮತ್ತು 11ರ ಕಾಮಗಾರಿಗಳ ಅಂದಾಜು ಪಟ್ಟಿ ನಿಗಮದ ಪರಿಶೀಲನೆಯಲ್ಲಿದೆ. ಚಳ್ಳಕೆರೆ ತಾ ಲೂಕು ರಾಣಿಕೆರೆಗೆ ವೇದಾವತಿ ನದಿ ನೀರನ್ನು 39 ಕಿ.ಮೀ.ನಾಲೆಯ ಮುಖಾಂತರ ಹರಿಸುವ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮದಿಂದ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಅನುದಾನ ಸಹಿತ ಹಸ್ತಾಂತರಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.
ಇನ್ನೂರ ನಲ್ವತ್ಮೂರು ಕೋಟಿ ರೂ.ವೆಚ್ಚದಲ್ಲಿ ಹೊಳಲ್ಕೆರೆ ತಾಲೂಕಿನ 21 ಕೆರೆಗಳನ್ನು ತುಂಬಿಸುವ, 710 ಕೋಟಿ ರೂ.ವೆಚ್ಚದಲ್ಲಿ ಚಳ್ಳಕೆ ರೆ ತಾಲೂಕಿನ 51 ಹಾಗೂ ಮೊಳಕಾಲ್ಮೂರು ತಾಲೂಕಿನ 20 ಕೆರೆಗಳು, ತುಮಕೂರು ಜಿಲ್ಲೆ ಪಾವಗಡ ತಾಲೂಕಿನ 30 ಕೆ ರೆಗಳು ಹಾಗೂ 1288 ಕೋಟಿ ರೂ.ವೆಚ್ಚದಲ್ಲಿ ಚಿಕ್ಕನಾಯಕನಹಳ್ಳಿಯ 19,ಶಿರಾ ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ 41ಕೆರೆಗಳನ್ನು ನೀರು ತುಂಬಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿರುವ ಶಿವಕುಮಾರ್,ಭದ್ರಾ ಮೇಲ್ದಂಡೆ ಯೋಜನೆಯಡಿ ಈವರೆಗೆ ಆಗಿರುವ ಕಾಮಗಾರಿ ವಿವರವನ್ನು ಶಾಸಕರಿಗೆ ಒದಗಿಸಿದ್ದಾರೆ.
----