ಜಿಲ್ಲೆ

ಭದ್ರಾ ಪ್ರಸ್ತಾಪಿಸದಿರುವುದೆ ಬೇಸರ

Chitradurga - Desk - Pranav Kumar

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಒದಗಿಸುವ ಸಂಬಂಧ ಕೇಂದ್ರ ಬಜೆಟ್‌ನಲ್ಲಿ ಯಾವುದೇ ವಿಷಯ ಪ್ರಸ್ತಾಪಿಸಿಲ್ಲ ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಬೇಸರಿಸಿದ್ದಾರೆ.

ಹಿಂದಿನ ಬಜೆಟ್‌ನಲ್ಲೇ 5,300 ಕೋಟಿ ರೂ. ಘೋಷಿಸಿದ್ದರೂ ಈವರೆಗೂ ನಯಾ ಪೈಸೆ ಬಿಡುಗಡೆಯಾಗಿಲ್ಲ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಆದರೂ ಬಿಡುಗಡೆಗೆ ಕ್ರಮವಹಿಸಿಲ್ಲ. ಇಡೀ ಜಿಲ್ಲೆಯ ಜನತೆಗೆ ಬೇಸರ ಮೂಡಿಸಿದೆ ಎಂದು ತಿಳಿಸಿದ್ದಾರೆ.