ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಖಂಡನೀಯ. ಇಂತಹ ಘಟನೆಗಳು ನಡೆಯಬಾರದು ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.
ಮೊಟ್ಟೆಯನ್ನು ನಮ್ಮ ಪಕ್ಷದವರು ಎಸೆದರೋ, ತಾವಾಗಿಯೇ ಒಗೆಸಿಕೊಂಡರೋ ಎಂಬುದು ತನಿಖೆಯಿಂದ ಹೊರ ಬರಲಿ. ವಿರೋಧ ಪಕ್ಷದ ನಾಯಕರಿಗೆ ಭದ್ರತೆ ನೀಡುವಲ್ಲಿ ಸರ್ಕಾರದ ಲೋಪವಾಗಿಲ್ಲ ಎಂದರು.
ಮೊಟ್ಟೆ ಎಸೆದಿರುವ ವಿಷಯ ಇಟ್ಟಿಕೊಂಡು ಕಾಂಗ್ರೆಸ್ನವರು ವಿಪರೀತ ರಾಜಕೀಯ ಮಾಡುತ್ತಿದ್ದಾರೆ. ತತ್ತಿ ಮೇಲೆ ರಾಜಕೀಯ ಮಾಡುವ ಪರಿಸ್ಥಿತಿ ಕಾಂಗ್ರೆಸ್ಗೆ ಬಂದಿದ್ದು ಶೋಚನೀಯ ಎಂದು ಲೇವಡಿ ಮಾಡಿದರು.
ಕೊಡಗಿನಲ್ಲಿ ವಿಶೇಷವಾಗಿ ಟಿಪ್ಪು ಸುಲ್ತಾನ್ ಬಗ್ಗೆ ಭಾರಿ ವಿರೋಧವಿದೆ. ಸಾವರ್ಕರ್ ಹಾಗೂ ಟಿಪ್ಪು ಕುರಿತಾದ ವಿರೋಧದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅಲ್ಲಿಗೆ ಹೋಗಿರುವ ಉದ್ದೇಶ ಏನು? ಕಾನೂನು ಸುವ್ಯವಸ್ಥೆ ಹಾಳಾಗಲಿ ಎನ್ನುವ ಉದ್ದೇಶದಿಂದಲೇ ಅಲ್ಲಿಗೆ ಹೋಗಿದ್ದಾರೆ. ಜವಾಬ್ದಾರಿಯುತ ನಾಯಕರಾದವರು ಪ್ರಚಾರಕ್ಕಾಗಿ ಮನಬಂದಂತೆ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.