ಯಲ್ಲಾಪುರ: ಅಂಕೋಲಾದಲ್ಲಿ ನಾಗರಿಕ ವಿಮಾನ ನಿಲ್ದಾಣಕ್ಕಾಗಿ ಕೃಷಿಭೂಮಿ, ಮನೆ ಕಳೆದುಕೊಳ್ಳುವವರ ಬದುಕಿಗೆ ಭದ್ರ ನೆಲೆ ಕಲ್ಪಿಸಿಕೊಡುವ ಕಾರ್ಯ ನಮ್ಮ ಮೊದಲ ಆದ್ಯತೆಯಾಗಿದೆ. ಅದಾದ ನಂತರವೇ ನಿಲ್ದಾಣ ಕಾಮಗಾರಿಗೆ ಕೈ ಹಾಕುತ್ತೇವೆ. ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಗುಳ್ಳಾಪುರದಲ್ಲಿ 7.16 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ 33/11 ಕೆವಿ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗುಳ್ಳಾಪುರದಲ್ಲಿ ಗ್ರಿಡ್ ಆರಂಭಿಸುವುದು ನನ್ನ ನಾಲ್ಕು ದಶಕಗಳ ಕನಸಾಗಿತ್ತು. ಹಲವರ ಪರಿಶ್ರಮ, ಸಹಕಾರದಿಂದ ಈಗ ನನಸಾಗಿದೆ ಎಂದರು. ಸಂಸದ ಅನಂತಕುಮಾರ ಹೆಗಡೆ, ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ತಾ.ಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಜಿಪಂ ಸದಸ್ಯರಾದ ಶ್ರುತಿ ಹೆಗಡೆ, ಜಗದೀಶ ನಾಯ್ಕ, ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಗ್ರಾಪಂ ಮಾಜಿ ಸದಸ್ಯ ಶ್ರೀಕಾಂತ ಶೆಟ್ಟಿ, ಕಾರವಾರ ಎಇಇ ರೋಶನಿ, ಅಂಕೋಲಾ ತಾ.ಪಂ ಇಒ ಪರಶುರಾಮ ಸಾವಂತ, ಹೆಸ್ಕಾಂ ಅಧಿಕಾರಿಗಳಾದ ದೀಪಕ ಕಾಮತ, ತಿಪ್ಪಣ್ಣ, ಟಿ.ಪಿ.ಶೆಟ್ಟಿ, ಡಿ. ಬಿ. ಕಾಂಬ್ಳೆ, ಮಂಜುನಾಥ ಉಪಸ್ಥಿತರಿದ್ದರು. ಶ್ರದ್ಧಾ ಭಟ್ಟ ಪ್ರಾರ್ಥಿಸಿದರು. ಎಇಇ ವಿನಾಯಕ ಪೇಟ್ಕರ್, ಸಹಾಯಕ ಇಂಜಿನಿಯರ್ ಮೇಘರಾಜ ನಿರ್ವಹಿಸಿದರು.