ಸಿಂಧನೂರು: ತಾಲೂಕಿನ ವಿವಿಧೆಡೆ ಗುರುವಾರ ಮಳೆ ಸುರಿದಿದ್ದು, ಭತ್ತ ಬೆಳೆದಿರುವ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಕುರುಕುಂದ ಸೇರಿದಂತೆ ಹಲವೆಡೆ ಕಟಾವಿಗೆ ಬಂದಿರುವ ಭತ್ತದ ಫಸಲು ನೆಲಕ್ಕೆ ಅಪ್ಪಳಿಸಿದೆ. ಭತ್ತ ಒಂದು ವಾರದಲ್ಲಿ ಕಟಾವಿಗೆ ಬರಲಿದೆ. ಕೆಲವೆಡೆ ಈಗಾಗಲೇ ಕಟಾವು ಆರಂಭವಾಗಿದೆ. ಮಳೆ ಮುಂದುವರಿದರೆ ಬೆಳೆ ಹಾನಿ ಬಗ್ಗೆ ರೈತರು ಆತಂಕಗೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕೂಡ ಗಣನೀಯವಾಗಿ ಇಳಿಕೆಯಾಗಿದ್ದು, ಮಳೆ ಮುಂದುವರಿದರೆ ಭತ್ತದ ಬೆಲೆ ಮತ್ತಷ್ಟು ಇಳಿಯುವ ಸಾಧ್ಯತೆಗಳಿವೆ.