ಜಿಲ್ಲೆ

ಭತ್ತ ಕಟಾವು ಯಂತ್ರಗಳ ಬಾಡಿಗೆ ದರ ನಿಗದಿ

ಮೈಸೂರು: ಕಂಬೈನ್ಸ್ ಹಾರ್ವೆಸ್ಟರ್ ಯಂತ್ರಗಳ ಬಾಡಿಗೆ ದರವನ್ನು ನಿಗದಿಪಡಿಸುವ ಸಲುವಾಗಿ ಶುಕ್ರವಾರ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಜಿಲ್ಲೆಯಲ್ಲಿ 2025-26 ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ 11,612 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಪ್ರದೇಶವಿದ್ದು, ಈಗಾಗಲೇ ಕಟಾವು ಕಾರ್ಯ ಪ್ರಾರಂಭವಾಗಬೇಕಾಗಿರುತ್ತದೆ. ಭತ್ತ ಹಾಗೂ ರಾಗಿ ಕಟಾವಿಗೆ ರೈತರು ಕಂಬೈನ್ಸ್ ಹಾರ್ವೆಸ್ಟರ್ ಯಂತ್ರಗಳನ್ನು ಬಾಡಿಗೆಗೆ ಪಡೆದು ಒಕ್ಕಣೆ ಮಾಡುವುದು ವಾಡಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿ ಗಂಟೆಗೆ ಚೈನ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ 2500 ರೂ., ಟೈರ್ (ಗ್ರಿಪ್) ಮಾದರಿ ಭತ್ತದ ಕಟಾವು ಯಂತ್ರಕ್ಕೆ 2,000 ರೂ., ಟೈರ್ (ಸಾಮಾನ್ಯ) ಮಾದರಿ ಭತ್ತದ ಕಟಾವು ಯಂತ್ರಕ್ಕೆ 1800 ರೂ., ರಾಗಿ ಕಟಾವು ಯಂತ್ರಕ್ಕೆ 2900 ರೂ. ದರ ನಿಗದಿಪಡಿಸಲಾಯಿತು.

ರೈತರು, ರೈತ ಮುಖಂಡರು, ಪೊಲೀಸ್ ಅಧಿಕಾರಿಗಳು, ಆರ್‌ಟಿಒ ಅಧಿಕಾರಿಗಳು ಹಾಗೂ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.