ಭಟ್ಕಳ: ಲಾಕ್ಡೌನ್ನಲ್ಲಿ ಸಿಲುಕಿಕೊಂಡ ರಾಜಸ್ಥಾನದ ಕಾರ್ವಿುಕರಿಗೆ ಕೊನೆಗೂ ಅವರ ಊರಿಗೆ ತೆರಳುವ ಭಾಗ್ಯ ದೊರಕಿದೆ. ಮೊದಲ ಹಂತದಲ್ಲಿ 31 ಕಾರ್ವಿುಕರು ಊರಿಗೆ ಹೋಗುವ ಅವಕಾಶ ಪಡೆದಿದ್ದಾರೆ.
ತಾಲೂಕಿನ ಹುರುಳಿಸಾಲ್, ಅಲ್ಖಲೀಜ್ ಹೋಟೆಲ್ ರಂಗೀನಕಟ್ಟೆ, ಮಣ್ಕುಳಿ, ಮುರ್ಡೆಶ್ವರದ ಒಟ್ಟು 31 ಮಂದಿ ಮೊದಲ ಬಾರಿಗೆ ಅವಕಾಶ ಪಡೆದಿದ್ದಾರೆ. ಅವರನ್ನು ಇಲ್ಲಿನ ತಹಸೀಲ್ದಾರ್ ಕಚೇರಿ ಸಮೀಪ ಕರೆಸಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷೆ ಮಾಡಲಾಯಿತು. ಬಳಿಕ ಅವರ ಹೆಸರು ಪರಿಶೀಲಿಸಿ ಕೆಎಸ್ಆರ್ಟಿಸಿ ಬಸ್ ಮೂಲಕ ಹುಬ್ಬಳ್ಳಿಗೆ ಕಳುಹಿಸಲಾಯಿತು. ಗುರುವಾರ ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿಯಿಂದ ರೈಲ್ವೆ ಮೂಲಕ ಅವರು ರಾಜಸ್ಥಾನಕ್ಕೆ ತೆರಳಲಿದ್ದಾರೆ.
ಈ ವೇಳೆ ಉಪತಹಸೀಲ್ದಾರ್ ಭಾಸ್ಕರ ಭಟ್ಟ, ವಲಸೆ ಕಾರ್ವಿುಕ ವಿಭಾಗದ ಅಂತರ್ ರಾಜ್ಯ ತಾಲೂಕು ನೋಡಲ್ ಅಧಿಕಾರಿ ಸಂಶುದ್ದೀನ್, ವಲಸೆ ಕಾರ್ವಿುಕರ ವಿಭಾಗ ಜಿಲ್ಲಾ ನೋಡಲ್ ಅಧಿಕಾರಿ ಪುರುಷೋತ್ತಮ, ಭಟ್ಕಳ ಕಾರ್ವಿುಕ ಇನ್ಸ್ಪೆಕ್ಟರ್ ರೇಖಾ, ಮೀನುಗಾರಿಕೆ ಇಲಾಖೆ ಅಧಿಕಾರಿ ಚೇತನ, ತಹಸೀಲ್ದಾರ್ ಕಚೇರಿ ಸಿಬ್ಬಂದಿ ನಾಗರಾಜ ಮೋಗೇರ, ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.