ಕಾರವಾರ: ವೀಸಾ ನಿಯಮ ಉಲ್ಲಂಘಿಸಿ ದೆಹಲಿಗೆ ತೆರಳಿದ ಪಾಕಿಸ್ತಾನಿ ಮಹಿಳೆ ಹಾಗೂ ಆಕೆಗೆ ಸಹಕರಿಸಿದ ಪತಿಗೆ ತಲಾ ಜೈಲು ಶಿಕ್ಷೆ ಹಾಗೂ ದಂಡ ವಿಽಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಭಟ್ಕಳದ ಮೌಲಾನಾ ಆಜಾದ್ ರಸ್ತೆಯ ಮಹಮದ್ ಇಲಿಯಾಸ್ ಮಹಮದ್ ಇಸ್ಮಾಯಿಲ್ ಪಿಲ್ಲೂರು ಹಾಗೂ ಅವರ ಪಾಕಿಸ್ತಾನಿ ಮೂಲದ ಪತ್ನಿ ನಸೀರಾ ಪರ್ವಿನ್ ಶಿಕ್ಷೆಗೊಳಗಾದವರು.
ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿ ತಾತ್ಕಾಲಿಕ ವೀಸಾ ಪಡೆದು ಬಂದು ಭಟ್ಕಳದಲ್ಲಿ ವಾಸವಿದ್ದ ಇಲಿಯಾಸ್ ಪಿಲ್ಲೂರು 2014 ರಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೇ ವೀಸಾ ಅವಽ ವಿಸ್ತರಣೆಯ ಸಲುವಾಗಿ ಆಕೆಯೊಂದಿಗೆ ದೆಹಲಿಗೆ ತೆರಳಿದ್ದ ಎನ್ನಲಾಗಿದೆ. ಈ ಸಂಬAಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಶಾಂತ ಎಸ್.ನಾಯಕ ತನಿಖೆ ನಡೆಸಿ ದೊಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾಚರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಽÃಶ ಡಿ.ಎಸ್.ವಿಜಯಕುಮಾರ್ ಇಬ್ಬರಿಗೂ ಶಿಕ್ಷೆ ಪ್ರಕಟಿಸಿದ್ದಾರೆ. ಪತಿ ಇಲಿಯಾಸ್ ಪಿಲ್ಲೂರ್‌ಗೆ 1 ತಿಂಗಳ ಸಾದಾ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಽಸಿದ್ದಾರೆ. ಹಾಗೂ ಪತ್ನಿ ನಸೀರಾ ಪರ್ವಿನ್‌ಗೆ 6 ತಿಂಗಳ ಸಜೆ ಹಾಗೂ 10 ಸಾವಿರ ರೂ. ದಂಡ ವಿಽಸಿದ್ದಾರೆ. ಇಬ್ಬರೂ ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳ ಸಜೆ ವಿಽಸುವಂತೆ ಆದೇಶಿಸಿದ್ದಾರೆ. ಸರ್ಕಾರದ ಪದವಾಗಿ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.