ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಶೃಂಗೇರಿ ಶಂಕರಮಠ, ಹವ್ಯಕ ಆತ್ಮಬಂಧು ಒಕ್ಕೂಟ, ದಿನೇಶ್ ಜೋಷಿ ೌಂಡೇಶನ್‌ಯಿಂದ ಆಯೋಜಿಸಿದ್ದ ಭಜನಾ ಪಂದ್ಯಾವಳಿಯನ್ನು ವಾಗ್ಮಿ ಹಿರೇಮಗಳೂರು ಕಣ್ಣನ್ ಉದ್ಘಾಟಿಸಿದರು. ಗಿರಿಜಾ ರಾಮಚಂದ್ರ, ದಿನೇಶ್ ಕುಮಾರ್ ಜೋಷಿ, ಟಿ.ವಿ.ಪಾಂಡುರಂಗ, ಗಣಪತಿ ಮಂಡಗಳಲೆ ಇತರರಿದ್ದರು. 
ಜಿಲ್ಲೆ

ಭಜನೆ ಧಾರ್ಮಿಕ ಸಂಸ್ಕೃತಿಯ ಪ್ರತೀಕ

ಟಿ.ಎಚ್.ಸಂತೋಷ್ ಕುಮಾರ್

ಸಾಗರ: ಭಜನೆ ನಮ್ಮ ಧಾರ್ಮಿಕ ಸಂಸ್ಕೃತಿಯ ಪ್ರತೀಕ. ಗ್ರಾಮಾಂತರ ಪ್ರದೇಶಗಳಲ್ಲಿ ಭಜನೆ ಸಾಮೂಹಿಕ ಒಗ್ಗೂಡುವಿಕೆಯ ಮಹತ್ವವನ್ನು ಪರಿಚಯಿಸುತ್ತದೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ತಿಳಿಸಿದರು.

ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಶೃಂಗೇರಿ ಶಂಕರಮಠ, ಹವ್ಯಕ ಆತ್ಮಬಂಧು ಒಕ್ಕೂಟ, ದಿನೇಶ್ ಜೋಷಿ ೌಂಡೇಶನ್‌ಯಿಂದ ಆಯೋಜಿಸಿದ್ದ ಎರಡು ದಿನಗಳ ಅಖಂಡ ಭಜನಾ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ನನ್ನ ಸ್ವರದಲ್ಲಿ ಭಜನೆ ಮಾಡಿದ್ದೇನೆ. ಆದರೆ ಭಗವಂತನ ಸ್ವರದಲ್ಲೂ ಭಜನೆ ಇದೆ ಎಂದು ತೋರಿಸಿಕೊಟ್ಟಿದ್ದು ಭಾರತದ ಭಜನೆಗಾರರು ಎಂಬುದು ದಾಖಲಾರ್ಹ ಸಂಗತಿ. ಭಜನೆ ಹೃದಯದಿಂದ ಬರುತ್ತದೆ. ಹೃದಯದಲ್ಲಿ ಭಗವಂತ ನೆಲೆಸಿದ್ದಾನೆ ಎಂದು ನಾವು ನಂಬಿದ್ದೇವೆ. ಇಡೀ ಲೋಕದ ಸ್ಥಿತಿಗತಿಯನ್ನು ಭಜನೆ ಮೂಲಕ ಹೇಳುವ ಶಕ್ತಿ ಹೊಂದಿರುವುದನ್ನು ನಮ್ಮ ಗ್ರಾಮೀಣ ಭಜನೆಗಾರರು ತೋರಿಸಿ ಕೊಟ್ಟಿದ್ದಾರೆ. ಉಸಿರೇ ದೇವರು ಎನ್ನುವುದನ್ನು ನಮ್ಮ ಭಜನೆ ನಮಗೆ ತೋರಿಸಿಕೊಟ್ಟಿದೆ. ಭಗವಂತನಿಗೆ ಭಕ್ತಿ ಸಮರ್ಪಿಸಲು ಭಜನೆ ಒಂದು ಮಹತ್ವವಾದ ಮಾರ್ಗ ಎಂದರು.

ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ದೇವರನ್ನು ಸ್ಮರಿಸುವ ವಿಶೇಷ ಶಕ್ತಿ ಭಜನೆಯಲ್ಲಿದೆ. ಮೊಬೈಲ್, ಇಂಟರ್‌ನೆಟ್‌ನಲ್ಲಿ ಮುಳುಗಿರುವ, ಟಿವಿ ಧಾರಾವಾಹಿಗಳಿಂದ ಮಹಿಳೆಯರನ್ನು ಇಂತಹ ಕಾರ್ಯಕ್ರಮಗಳಿಗೆ ಕರೆ ತಂದ ಶಕ್ತಿ ಭಜನೆ ಸಂಘಟಕರದ್ದಾಗಿದೆ. ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವನ್ನು ಇಂತಹ ಕಾರ್ಯಕ್ರಮಗಳು ಮಾಡುತ್ತವೆ ಎಂದರು.

ಭಜನಾ ಪೋಷಕರಾದ ಕೆ.ಎನ್.ಶ್ರೀಧರ್, ಡಿ.ಆರ್.ರಾಮಪ್ಪ, ಮಮತಾ ಅರುಣಕುಮಾರ್, ವೀಣಾ ಬೆಳೆಯೂರು, ಚಂದ್ರಪ್ಪ ಹೊಸಕೇರಿ, ಗೋಪಿ ದೀಕ್ಷಿತ್, ಪ್ರಭಾ ಆರ್. ಪೈ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಅಧ್ಯಕ್ಷೆ ಗಿರಿಜಾ ರಾಮಚಂದ್ರ, ದಿನೇಶ್ ಕುಮಾರ್ ಜೋಷಿ, ಶ್ರೀಮಹಾಗಣಪತಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ, ಗಣಪತಿ ಮಂಡಗಳಲೆ, ಎಂ.ಟಿ.ಗುಂಡಪ್ಪ, ಕೆ.ವಿ.ಜಯರಾಮ್, ಮಾ.ಸ.ನಂಜುಂಡಸ್ವಾಮಿ, ಅಶ್ವಿನಿ ಕುಮಾರ್, ರೇಷ್ಮಾ, ಶಾಂತಾ ಇತರರಿದ್ದರು.