ಔರಾದ್: ಭಗವಂತನ ಮೇಲೆ ನಂಬಿಕೆ, ವಿಶ್ವಾಸ ಇಟ್ಟು ಯಾವುದೇ ಕಾರ್ಯ ಮಾಡಿದರೆ ಅದರಲ್ಲಿ ಸಫಲತೆ ಕಾಣಲು ಸಾಧ್ಯ ಶ್ರೀ ಶಂಕರಲಿಂಗ ಶಿವಾಚಾರ್ಯರು ನುಡಿದರು.
ಚಿಂತಾಕಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಶನಿವಾರ ಏರ್ಪಡಿಸಿದ್ದ ಸಾಮೂಹಿಕ ಲಕ್ಷ್ಮೀ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಜೀವನದಲ್ಲಿ ಸಂಪಾದನೆ, ದೇಹ ಶಾಶ್ವತವಲ್ಲ. ಭಕ್ತಿ ಮಾರ್ಗದ ಮೂಲಕ ಜೀವನ ಪಾವನಗೊಳಿಸಲು ಭಗವಂತನ ಆರಾಧನೆ ಮಾಡಬೇಕು. ಧರ್ಮ ಸಂಗ್ರಹ ಮಾಡುತ್ತ ಜೀವನೋತ್ಸಾಹದಿಂದ ಮುನ್ನಡೆಯಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮ ಜಾಗೃತಿಯೊಂದಿಗೆ ಸಮಾಜದ ಅಭಿವೃದ್ಧಿ ಮಾಡುತ್ತಿದೆ ಎಂದರು.
ಪಿಎಸ್‌ಐ ಸಿದ್ದಲಿಂಗ ಸಿಂಗ್ ಶೆಟ್ಟಿ ಮಾತನಾಡಿ, ಸಾಮೂಹಿಕ ಲಕ್ಷ್ಮೀ ಪೂಜೆ ಆಚರಣೆಯಿಂದ ದುಖಃ ನಿವಾರಣೆಯಾಗಿ ಧನಧಾನ್ಯ ಸಮೃದ್ಧಿ ಆಗಲಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಚಿಂತನೆ ಕ್ಷೀಣಿಸುತ್ತಿದ್ದು, ಜನರು ನಿರಂತರವಾಗಿ ಧಾರ್ಮಿಕ ಆಚರಣೆ ಮಾಡಿ, ಧರ್ಮ ಜಾಗೃತಿ ಆಗಬೇಕು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವಕುಮಾರ ಬೈರವಾಡಗಿ, ಎಸ್‌ಕೆಡಿಆರ್‌ಡಿಪಿ ಯೋಜನೆ ತಾಲೂಕು ಕ್ಷೇತ್ರ ಯೋಜನಾಧಿಕಾರಿ ರಾಘವೇಂದ್ರ ಗೌಡ, ಲೋಕೇಶ ಭಾಲ್ಕೆ, ಗ್ರಾಪಂ ಅಧ್ಯಕ್ಷ ರಾಮರೆಡ್ಡಿ ಕೌಡಾಳೆ, ಸಂಗಾರೆಡ್ಡಿ ತೋಂಟ, ವಿಲಾಸ ಪೂಜಾರಿ, ಬಸವರಾಜ, ಬೀರಪ್ಪ, ಮಲ್ಲಿಕಾರ್ಜುನ ಪಾಟೀಲ್, ಸಂಗೀತಾ, ಮಹಾದೇವಿ, ಸುನೀತಾ ಇತರರಿದ್ದರು.