ಜಿಲ್ಲೆ

ಭಗವಂತನ ಸ್ಮರಣೆ ಮಾಡಿ

ವಿಜಯಪುರ: ಪ್ರತಿನಿತ್ಯ ಭಗವಂತನ ನಾಮಸ್ಮರಣೆ ಮಾಡುವುದರಿಂದ ಎಲ್ಲರ ಶ್ರೇಯೋಭಿವೃದ್ಧಿ ಸಾಧ್ಯ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿವೃತ್ತ ನೌಕರ ಜಗನ್ನಾಥ ಕನಮಡಿ ಹೇಳಿದರು.

ಇಲ್ಲಿನ ಗೋಡಬೋಲೆ ಮಾಳಾ ಬಡಾವಣೆಯಲ್ಲಿರುವ ಶ್ರೀ ತ್ರಿವಿಕ್ರಮ ದೇವಸ್ಥಾನದಲ್ಲಿ ಶಿಕ್ಷಣ ಚೇತನ ಸಂಸ್ಥೆ ಬಳಗದಿಂದ ವಿಜಯದಶಮಿ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಭಾ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಮಹಿಳಾ ವಿವಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸುಷ್ಮಾ ನಾಯಕ, ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿದಲ್ಲಿ ಖಂಡಿತ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಎಸ್.ಜಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆ ಸಂಚಾಲಕ ಅನಂತ ಪಾಟೀಲ, ದೇವಸ್ಥಾನದ ಮುಖ್ಯ ಅರ್ಚಕ ಬಂಡು ದೀಕ್ಷಿತ, ವೆಂಕಟೇಶ ಕಟ್ಟಿ, ಸಮೀರ ಕುಲಕರ್ಣಿ, ಆದಿತ್ಯ ತಾವರಗೇರಿ ಇದ್ದರು.