ಮಾನ್ವಿ: ಅಧ್ಯಾತ್ಮದ ಅರಿವು ಮೂಡಿಸಿ, ಜ್ಞಾನದ ಬೆಳಕು ತೋರಿ ಜನರನ್ನು ಸನ್ಮಾರ್ಗದತ್ತ ಮುನ್ನಡೆಸುವವರೇ ನಿಜವಾದ ಗುರುಗಳು ಎಂದು ಮಟಮಾರಿಯ ಜ್ಞಾನಾನಂದ ಸ್ವಾಮಿಗಳು ಹೇಳಿದರು.
ನೀರಮಾನ್ವಿ ಗ್ರಾಮದ ಸದ್ಗರು ಸಿದ್ಧಾರೂಢ ಮಠದ ಆವರಣದಲ್ಲಿ ಬ್ರಹ್ಮಲೀನ ಸದ್ಗರು ಬಸವಾನಂದರ 17 ನೇ ಪುಣ್ಯಸ್ಮರಣೋತ್ಸವ, ಬ್ರಹ್ಮಲೀನ ಸದ್ಗರು ಸಿದ್ಧಲಿಂಗಪ್ಪ ತಾತ ಅವರ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಭಗವಂತನ ನಾಮಸ್ಮರಣೆ ಮೋಕ್ಷ ಕರುಣಿಸುತ್ತದೆ. ನಮ್ಮ ಮೂಲ ಸ್ವರೂಪ ಅರಿಯುವುದಕ್ಕೆ ಭಜನೆ, ಉಪನ್ಯಾಸ, ಗುರುವಾಣಿ ಆಲಿಸಬೇಕು. ಇದರಿಂದ ಮುಕ್ತಿಯ ದಾರಿ ತಿಳಿಯಲು ಸಾಧ್ಯ ಎಂದು ತಿಳಿಸಿದರು.
ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ವಿಜಯಪುರ ಸಿದ್ಧಾರೂಢಮಠದ ಅಭಿನವ ಸಿದ್ಧಾರೂಢ ಸ್ವಾಮಿಗಳು, ಪಾಲಬಾವಿ ವೀರಯ್ಯಸ್ವಾಮಿ, ಶಾಂತಮಲ್ಲ ಕುಟೀರ, ಕಲ್ಲೂರು ಶಂಕರಾಚಾರ್ಯ ಮಠದ ಶಿವರಾಮಾನಂದ ಭಾರತಿ ಸ್ವಾಮಿಗಳು, ಹನುಮಂತಪ್ಪ ಶಂಕರಾಚಾರಿ ಮಠ, ಗುರುಬಸವ ರಾಜಗುರು, ಕರಿಯಪ್ಪ ಜಕ್ಕಲದಿನ್ನಿ, ನರಸಣ್ಣ ಗುರುಗಳು, ರಾಜು ಇತರರು ಇದ್ದರು.