ಜಿಲ್ಲೆ

ಭಗವಂತನ ಉಪಕಾರ ಸದಾ ಸ್ಮರಿಸಬೇಕು

ಬಸವಕಲ್ಯಾಣ: ಭಗವಂತನ ಉಪಕಾರ ಸದಾ ಸ್ಮರಿಸಬೇಕು ಎಂದು ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠ ಟ್ರಸ್ಟ್, ಶ್ರೀ ಮದ್ವೀರಶೈವ ಸದ್ಬೋಧನ ಸಂಸ್ಥೆ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಸಂಜೆ ಗವಿಮಠದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ, ವಚನ ಸಾಹಿತ್ಯ ಉಪನ್ಯಾಸ ಮಾಲೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಶಿವ ಪಥವ ಅರಿದೊಡೆ ಗುರುಪಥವೇ ಮೊದಲು. ನ ಗುರೋರ ಅಧಿಕಂ. ಭಕ್ತ ಮುಮುಕ್ಷಗಳ ಬದುಕು ಹಸನಾಗಬೇಕು. ಸದೃಢ ಸಮಾಜ ನಿರ್ಮಾಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಟೆಂಗಳಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಜಗದ್ಗುರು ಘನಲಿಂಗರು ಶಿವ ಶರಣರಿಗೆ ಇಷ್ಟಲಿಂಗ ದೀಕ್ಷೆಕೊಟ್ಟು ಮುಕ್ತಿ ಮಾರ್ಗ ತೋರಿದ ಮಹಾಮಹಿಮರು. ಶಕ್ತಿ ತೋರಿದ ಪವಾಡ ಪುರುಷರು. ಇವರು ಕಾಲಜ್ಞಾನಿಗಳೂ ಆಗಿದ್ದರು ಎಂದು ಹೇಳಿದರು.
ಮುಖಂಡ ಲೋಕೇಶ ಮೊಳಕೆರೆ ಮಾತನಾಡಿ, ಗವಿಮಠದ ಅಭಿನವ ಶ್ರೀಗಳ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಮುಖರಾದ ಬಾಬುರಾವ ಚಳಕಾಪುರೆ, ಮಹಾಂತೇಶ ಸ್ವಾಮಿ ನಾರಾಯಣಪುರ, ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆ ತಾಲೂಕು ಅಧ್ಯಕ್ಷ ಬಸವಂತಪ್ಪ ಲವಾರೆ, ರಮೇಶ ರಾಜೋಳೆ, ವಿಜಯಕುಮಾರ, ಸವಿತಾ ಸ್ವಾಮಿ, ಸುಭದ್ರಬಾಯಿ, ಮಡಿವಾಳಪ್ಪ ಕಲ್ಯಾಣ ಇತರರಿದ್ದರು. ಶಿವಕುಮಾರ ಮುನ್ನೊಳೆ ನಿರೂಪಣೆ ಮಾಡಿದರು. ಶಕುಂತಲಾ ಸ್ವಾಮಿ ಸ್ವಾಗತ ಗೀತೆ ಹಾಡಿದರು.