ಚಾಮರಾಜನಗರ : ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಭಗತ್‌ಸಿಂಗ್ ಯುವಸೇನೆ ವತಿಯಿಂದ ಶನಿವಾರ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ 118ನೇ ಜನ್ಮದಿನ ಆಚರಿಸಲಾಯಿತು.
ಭಗತ್‌ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು ಮಾತನಾಡಿ, ಭಗತ್ ಸಿಂಗ್ ಅವರು 23ನೇ ವಯಸ್ಸಿಗೆ ಸ್ವಾತಂತ್ರ್ಯಕ್ಕೋಸ್ಕರ ಕೆಚ್ಚೆದೆಯಿಂದ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ಧೀರ. ಇಂದಿನ ಯುವಕರು ಇಂತಹ ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಜೀವನವನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ದೇಶದ ಏಕತೆ ಮತ್ತು ಸೌಹಾರ್ದತೆಗೆ ಶ್ರಮಿಸಬೇಕು. ಪ್ರಬುದ್ಧ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಭಗತ್‌ಸಿಂಗ್ ಯುವಸೇನೆ ಉಪಾಧ್ಯಕ್ಷ ಮಹೇಶ್, ರಾಜು, ಕೃಷ್ಣ, ಮಹೇಶ್‌ಕುಮಾರ್, ಮಲ್ಲೇಶ್, ವಿಷಕಂಠ ಹಾಜರಿದ್ದರು.